ನವದೆಹಲಿ: WPL ಕಪ್ ಗೆಲ್ಲುವ ಮೂಲಕ RCB ನಾಯಕಿ ಸ್ಮೃತಿ ಮಂದಾನ RCB ಅಭಿಮಾನಿಗಳ ಬಹುದಿನಗಳ ಕನಸನ್ನು ನನಸು ಮಾಡಿದ್ದಾರೆ.
ಚಾಂಪಿಯನ್ ಟ್ರೋಫಿ ಎತ್ತಿ ಹಿಡಿದ ಸ್ಮೃತಿ ಮಂದಾನ, ‘ಈ ಸಲ ಕಪ್ ನಮ್ದೆ ಅಲ್ಲ, ಈ ಸಲ ಕಪ್ ನಮ್ದು ಎಂದು ಹೇಳುವ ಮೂಲಕ RCB ಫಾನ್ಸ್ ಗಳಿಗೆ ಉತ್ಸಾಹ ತುಂಬಿದ್ದಾರೆ.
ಈ ಪಂದ್ಯದಲ್ಲಿ ಸ್ಮೃತಿ ಮಂದಾನ 31 ರನ್ ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಬಲ ನೀಡಿದ್ದರು.. ನಂತರ ಸೋಫಿ ಡಿವೈನ್ 32 ರನ್ ಬಾರಿಸಿ ಔಟಾದರು. ಈ ವೇಳೆ ಬಂದ ಎಲ್ಲಿಸ್ ಪೇರಿ ಮತ್ತು ರಿಚ್ಚ ಘೋಷ್ ಅತ್ಯುತ್ತಮ ಬ್ಯಾಟಿಂಗ್ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಆರ್ ಸಿಬಿ ಮೂರು ಎಸೆತಗಳು ಬಾಕಿ ಇರುವಂತೆ 115 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಪುರುಷರ ಐಪಿಎಲ್ ನಲ್ಲಿ RCB ಕಪ್ ಗೆಲ್ಲಬೇಕು ಎಂದು ಸಾಕಷ್ಟು ವರ್ಷಗಳಿಂದ ಅಭಿಮಾನಿಗಳು ಕಾಯುತ್ತಿದ್ದರು. ಆದ್ರೆ, ಇದೀಗ WPL ನಲ್ಲಿ ಕಪ್ ಗೆಲ್ಲುವ ಮೂಲಕ ಅಭಿಮಾನಿಗಳಿಗೆ ಸಂತಸ ತಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296