ಬೆಂಗಳೂರು: ಸ್ವಚ್ಛತೆ ಮತ್ತು ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಬಳಸಿ ಐಸ್ ಕ್ರೀಂ ಮತ್ತು ತಂಪು ಪಾನೀಯ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ದಾಳಿ ನಡೆಸಿದಿದೆ.
ದಾಳಿಯ ನಂತರ ಒಟ್ಟು 220 ಅಂಗಡಿಗಳಲ್ಲಿ 97 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ತಪಾಸಣೆ ವೇಳೆ ಐಸ್ ಕ್ರೀಮ್ ಗಳಲ್ಲಿ ಕೆನೆ ಬಣ್ಣದ ವಿನ್ಯಾಸವನ್ನು ರಚಿಸಲು ಡಿಟರ್ಜೆಂಟ್ ಪೌಡರ್ ಅನ್ನು ಬಳಸಲಾಗುತ್ತಿತ್ತು. ಕೂಲ್ ಡ್ರಿಂಕ್ ಗಳಲ್ಲಿ ಮೂಳೆಗಳನ್ನು ದುರ್ಬಲಗೊಳಿಸುವ ಫಾಸ್ಪರಿಕ್ ಆಮ್ಲ ಹಾಗೂ ಫಿಜ್ ಅನ್ನು ಹೆಚ್ಚಿಸಲು ಬಳಸಲಾಗುತ್ತಿತ್ತು ಎಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಆಘಾತಕಾರಿ ಉಲ್ಲಂಘನೆ ಮಾಡಿರುವವರಿಗೆ ಇಲಾಖೆಯು ಒಟ್ಟು 38,000 ರೂ. ದಂಡ ವಿಧಿಸಲಾಗಿದೆ. ಮಕ್ಕಳು ಸಾಮಾನ್ಯವಾಗಿ ಸೇವಿಸುವ ಆಹಾರದ ಗುಣಮಟ್ಟ ಮತ್ತು ತಯಾರಿಕೆಯ ವಿಧಾನಗಳನ್ನು ನಿರ್ಣಯಿಸುವ ಪ್ರಯತ್ನಗಳ ಭಾಗವಾಗಿ, ಇಲಾಖೆಯು ಎರಡು ದಿನಗಳಲ್ಲಿ ತಪಾಸಣೆ ನಡೆಸಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4