ಭೂಮಿಯ ಮೇಲೆ ಚಿತ್ರ ವಿಚಿತ್ರ ಪ್ರಾಣಿ ಪಕ್ಷಿಗಳಿವೆ. ಅದರಲ್ಲೂ ಈ ಜಗತ್ತಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜಾತಿಯ ಹಾವುಗಳಿವೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಇವುಗಳಲ್ಲಿ ಕೆಲವು ಹೆಚ್ಚು ವಿಷಕಾರಿ. ಕೆಲವು ವಿಷಕಾರಿಯಲ್ಲದ ಹಾವುಗಳು. ಆದರೂ ಹಾವುಗಳಿಗೆ ಹೆದರುವ ಮಂದಿ ಜಾಸ್ತಿ.. ದೂರದಲ್ಲಿ ಹಾವು ಇದೆ ಎಂದು ತಿಳಿದರೆ ಅದೆಷ್ಟೋ ಜನ ಪ್ರಾಣ ಭಯದಿಂದ ಓಡುತ್ತಾರೆ. ಆದರೆ, ಇದೀಗ ಅಪರೂಪದ ಹಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರ ಕಲರ್ ನೋಡಿದ್ರೆ ನಿಮಗೂ ಶಾಕ್ ಆಗುತ್ತೆ..
ವೈರಲ್ ಆದ ವೀಡಿಯೊದಲ್ಲಿ, ವ್ಯಕ್ತಿಯೊಬ್ಬರು ಕೆಂಪು ಹಾವನ್ನು ಹಿಡಿದಿರುವುದನ್ನು ಕಾಣಬಹುದು. ಇದು ನಾಗರಹಾವು. ಇಲ್ಲಿ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಹಾವಿನ ಬಣ್ಣ ಕೆಂಪು. ಇದು ಬಹಳ ಅಪರೂಪದ ಹಾವು. ಕೆಂಪು ಬಣ್ಣದ ಹಾವನ್ನು ರೆಡ್ ಸ್ಪಿಟಿಂಗ್ ಕೋಬ್ರಾ ಎಂದು ಕರೆಯಲಾಗುತ್ತದೆ ಎಂದು ಹೇಳಲಾಗಿದೆ. ಇದನ್ನು ನೋಡಿ ನೆಟ್ಟಿಗರು ಆಶ್ಚರ್ಯ ಸೂಚಿಸಿದ್ದಾರೆ.
ಅನಿಮಲ್ ಡೈವರ್ಸಿಟಿ ವೆಬ್ಸೈಟ್ ಪ್ರಕಾರ, ಕೆಂಪು ಬಣ್ಣವನ್ನು ಹೊಂದಿರುವ ಈ ನಾಗರ ಹಾವು ಅಪರೂಪದ ಜಾತಿಯಾಗಿದೆ. ಇದು ಆಫ್ರಿಕಾದಲ್ಲಿ ಕಂಡುಬರುತ್ತದೆ. ಈಜಿಪ್ಟ್, ತಾಂಜಾನಿಯಾ, ಉಗಾಂಡಾ, ಸುಡಾನ್ ಮುಂತಾದ ಸ್ಥಳಗಳಲ್ಲಿ ಕಂಡುಬರುವ ಈ ಹಾವಿನ ವೈಜ್ಞಾನಿಕ ಹೆಸರು ನಜಾ ಪಲ್ಲಿಡಾ. ಈ ಹಾವುಗಳು ಅತ್ಯಂತ ವಿಷಕಾರಿ ಎಂದು ಹೇಳಲಾಗುತ್ತದೆ.ಈ ವೀಡಿಯೋ ನೋಡಿದರೆ ಸಾಮಾನ್ಯ ನಾಗರಹಾವಿಗಿಂತ ಭಿನ್ನವಾಗಿ ಕಾಣುತ್ತದೆ. ಇದು ಕೆಂಪು ಬಣ್ಣದಲ್ಲಿರುವಂತೆ ಕಾಣುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಇದುವರೆಗೆ ಲಕ್ಷ ಲಕ್ಷ ಮಂದಿ ವೀಕ್ಷಿಸಿದ್ದಾರೆ. ವಿಷಪೂರಿತ ನಾಗರಹಾವನ್ನು ನೋಡಿದ ಜನರು ಮತ್ತು ನೆಟಿಜನ್ ಗಳು ಅಚ್ಚರಿಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


