ತಿಪಟೂರು: ಸಹಕಾರಿ ಸಂಘಗಳು ಸದಸ್ಯರು ಹಾಗೂ ಶೇರುದಾರರ ನಂಬಿಕೆಯ ಆಧಾರದಲ್ಲಿ ನಡೆಯುತ್ತಿದ್ದು, ಸಂಘದಲ್ಲಿ ಸಾಲ ಪಡೆದ ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಸಂಘದ ಅಭಿವೃದ್ದಿಗೆ ಕೈ ಜೋಡಿಸ ಬೇಕು ಎಂದು ಕುಪ್ಪಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಬಿ.ಸಿದ್ದಲಿಂಗಮೂರ್ತಿ ತಿಳಿಸಿದರು.
ತಾಲ್ಲೂಕಿನ ಕುಪ್ಪಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿದ ಅವರು, ಸಹಕಾರ ಸಂಘಗಳು ಸದಸ್ಯರು ಹಾಗೂ ಶೇರುದಾರರ ಸಹಕಾರದಿಂದ ಅಭಿವೃದ್ದಿ ಹೊಂದಬೇಕಿದು, ಎಲ್ಲಾ ಒಬ್ಬರಿಗಾಗಿ ಒಬ್ಬರೂ ಎಲ್ಲರಿಗಾಗಿ ಎನ್ನುವ ತತ್ವದಡಿ ಸದಸ್ಯರು ನಂಬಿಕೆ ಇಟ್ಟು ಕೆಲಸ ಮಾಡಬೇಕು. ಕುಪ್ಪಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಲವಾರು ಏರಿಳಿತಗಳ ಮಧ್ಯ ಉತ್ತಮ ದಾರಿಯಲ್ಲಿ ನಡೆಯುತ್ತಿದೆ. ರೈತರಿಗೆ ಅನುಕೂಲಕಲ್ಪಿಸ ಬೇಕು ಎನ್ನುವ ದೃಷ್ಠಿಯಿಂದ ಶಾಸಕರು ಹಾಗೂ ಸಹಕಾರಿ ಸಚಿವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್ ರಾಜಣ್ಣನವರ ನೆರವಿನಿಂದ 1.50ಲಕ್ಷ ಸಾಲ ಸೌಲಭ್ಯ ನೀಡಿದ್ದು, ಸಾಲಪಡೆದ ಸದಸ್ಯರು ಸಕಾಲಕ್ಕೆ ಮರುಪಾವತಿ ಮಾಡಿ ಸಂಘದ ಅಭಿವೃದ್ದಿಗೆ ನೆರವಾಗುವ ಜೊತೆಗೆ ಮುಂದೆ ಸಾಲಪಡೆಯುವ ಸದಸ್ಯರಿಗೂ ಅನುಕೂಲಕಲ್ಪಿಸಿದಂತ್ತಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶೆಟ್ಟಿಹಳ್ಳಿ ಶಿವಣ್ಣ, ತಿಮ್ಮೇಗೌಡ, ಎನ್.ರವಿಕುಮಾರ್, ಚಂದ್ರಶೇಖರಯ್ಯ, ನಾಗರಾಜು, ಕೃಷ್ಣಮೂರ್ತಿ, ಮೋಹನ್ ಕುಮಾರ್, ಕೆ ಎಸ್ ಎಂ ಚಂದ್ರಶೇಖರಯ್ಯ ಶಿವಮ್ಮ, ಪುಟ್ಟತಾಯಮ್ಮ ಕಾರ್ಯದರ್ಶಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q