ತುಮಕೂರು: ಮಹಾನಗರಪಾಲಿಕೆ ವ್ಯಾಪ್ತಿ 1 ರಿಂದ 35ನೇ ವಾರ್ಡುಗಳಲ್ಲಿರುವ ಎಲ್ಲಾ ಆಸ್ತಿ(ಎ–ಖಾತಾ, ಬಿ-ಖಾತಾ ರಿಜಿಸ್ಟರ್)ಗಳನ್ನು ಇ–ಆಸ್ತಿಯಲ್ಲಿ ಕಾಲೋಚಿತಗೊಳಿಸಬೇಕಾಗಿರುವುದರಿಂದ ಆಸ್ತಿ ಮಾಲೀಕರು ಇ–ಆಸ್ತಿ ತಂತ್ರಾಂಶದಲ್ಲಿ ಖಾತಾ ಸೃಜನೆಗೆ ಅರ್ಜಿ ಸಲ್ಲಿಸಬೇಕು ಎಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಮನವಿ ಮಾಡಿದ್ದಾರೆ.
ಸಾರ್ವಜನಿಕರು ಇ–ಆಸ್ತಿ ತಂತ್ರಾಂಶದಲ್ಲಿ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಖಾತಾ ಸೃಜನೆಗೆ ನಿಗದಿತ ಶುಲ್ಕ 50 ರೂ.ಗಳನ್ನು ಪಾವತಿಸಿ ವಾರ್ಡು ಸಂಖ್ಯೆ 13ರಲ್ಲಿ ಮಹಾನಗರಪಾಲಿಕೆ ಆವರಣ, ವಾರ್ಡು ಸಂಖ್ಯೆ 2ರಲ್ಲಿ ಶಿರಾಗೇಟ್ ವಾಣಿಜ್ಯ ಸಂಕೀರ್ಣದ ಆವರಣ, ವಾರ್ಡ್ ಸಂಖ್ಯೆ 24ರಲ್ಲಿ ಎಸ್.ಎಸ್.ಪುರಂ 14ನೇ ಕ್ರಾಸ್, ವಾರ್ಡ್ ಸಂಖ್ಯೆ 31ರಲ್ಲಿ ಮಾರುತಿ ನಗರ ವಾಟರ್ ಟ್ಯಾಂಕ್ ಬಳಿ, ವಾರ್ಡ್ ಸಂಖ್ಯೆ 33ರಲ್ಲಿ ಎನ್.ಹೆಚ್.-4 ಕ್ಯಾತ್ಸಂದ್ರ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿರುವ ತುಮಕೂರು ಒನ್ ಸೇವಾ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಖಾತಾ ಸೃಜನೆಗೆ ಅರ್ಜಿ ಸಲ್ಲಿಸುವಾಗ 2024ರ ಏಪ್ರಿಲ್ 1ರ ನಂತರದ ನೋಂದಾಯಿತ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡುವ ಅವಶ್ಯಕತೆಯಿರುವುದಿಲ್ಲ. ನೋಂದಾಯಿತ ಪತ್ರ ಮತ್ತು ಇಸಿ/ಋಣಬಾರರಾಹಿತ್ಯ ಪ್ರಮಾಣ ಪತ್ರಗಳ ಸಂಖ್ಯೆಯನ್ನು ದಾಖಲಿಸಿ ವಿವರಗಳನ್ನು ಪರಿಶೀಲಿಸಿ ಸರಿ ಇರುವ ಬಗ್ಗೆ ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸತಕ್ಕದ್ದು.
ಇ-ಆಸ್ತಿ ತಂತ್ರಾಂಶದಲ್ಲಿ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಿಸಿದ ನೋಂದಾಯಿತ ದಾಖಲೆ ಮತ್ತು ಇಸಿ/ಋಣಭಾರರಾಹಿತ್ಯ ಪ್ರಮಾಣ ಪತ್ರಗಳನ್ನು Fetch ಮಾಡಿ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದ್ದಾರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4