ವಿಜಯಪುರ: ಮನೆಗಳಿಗೆ ನುಗ್ಗಿ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದ ಮುಸುಕುಧಾರಿ ದರೋರೆಕೋರರ ಮೇಲೆ ಗುಂಡಿನ ದಾಳಿ ನಡೆಸಿದ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಮಧ್ಯಪ್ರದೇಶದ ತಂಡ ವಿಜಯಪುರದಲ್ಲಿ ದರೋಡೆಗೆ ಯತ್ನಿಸಿದ ತಂಡ ಎಂದು ಹೇಳಲಾಗಿದ್ದು, ಮಹೇಶ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಸದ್ಯ ತಪ್ಪಿಸಿಕೊಂಡ ಮೂವರ ಪತ್ತೆಯಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಜೈನಾಪುರ ನಗರದಲ್ಲಿ ಸಂತೋಷ ಎಂಬುವರ ಮನೆಗೆ ಬುಧವಾರ ರಾತ್ರಿ ನುಗ್ಗಿದ್ದ ಈ ದರೋಡೆಕೋರರು ಚಾಕುವಿನಿಂದ ದಾಳಿ ನಡೆಸಿ ದರೋಡೆ ಮಾಡಿದ್ದರು. ಗುರುವಾರ ರಾತ್ರಿ ಕನಕದಾಸ ಬಡಾವಣೆಯಲ್ಲಿ ಮನೆಯೊಂದಕ್ಕೆ ನುಗ್ಗಿ ಮತ್ತೆ ದರೋಡೆಗೆ ಯತ್ನಿಸಿದ್ದರು. ಆಗ ಕುಟುಂಬಸ್ಥರು ಚೀರಾಡಿದ್ದಾರೆ. ನಾವು ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ನಾಲ್ವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಹೊರವಲಯದ ಟೋಲ್ ಪ್ಲಾಜಾ ಬಳಿ ಬೈಕ್ ನಲ್ಲಿ ನಾಲ್ವರು ಸಂಚಾರ ನಿಯಮ ಉಲ್ಲಂಘಿಸಿ ಹೋಗುತ್ತಿರುವಾಗ ಬೆನ್ನಟ್ಟಿದೆವು. ಆಗ ಬೈಕ್ ಜಾರಿ ಎಲ್ಲರೂ ಕೆಳಗಡೆ ಬಿದ್ದಿದ್ದಾರೆ. ಅಲ್ಲಿಂದ ಎದ್ದು ಜಮೀನಿನಲ್ಲಿ ಓಡುತ್ತಿದ್ದ ವೇಳೆ ಗುಂಡು ಹಾರಿಸಲಾಯಿತು. ಗುಂಡೇಟಿನಿಂದ ಗಾಯಗೊಂಡ ಮಹೇಶ್ ಸಿಕ್ಕಿಬಿದ್ದ. ಆತನನ್ನು ವಶಕ್ಕೆ ಪಡೆದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx