ಭಾರತೀಯ ಸಮೂಹ ಮಾಧ್ಯಮ ಮತ್ತು ಸಂಶೋಧನಾ ಸಂಸ್ಥೆ (ಐಎಂಎಸ್‌ಆರ್) ನೀಡುವ ‘ರೋಹಿತ್ ರಾಜಣ್ಣ ಪತ್ರಿಕೋದ್ಯಮ ಪ್ರಶಸ್ತಿ’ಗೆ ‘ಪ್ರಜಾವಾಣಿ’ಯ ಚಿಕ್ಕಮಗಳೂರು ಜಿಲ್ಲಾ ವರದಿಗಾರ ಎಸ್.ಕೆ. ವಿಜಯಕುಮಾರ್ ಆಯ್ಕೆ ಆಗಿದ್ದಾರೆ.
ಇವರು ಹಾಸನ ಜಿಲ್ಲೆಯವರು. ‘ಬೂದಿಯಾಗದ ಕೆಂಡ’ ಇವರ ಪ್ರಕಟಿತ ಕೃತಿಯಾಗಿದ್ದು, ಇದರಲ್ಲಿನ ‘ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು’ ಲೇಖನವು ಮೈಸೂರು ವಿಶ್ವವಿದ್ಯಾಲಯದ ಬಿ.ಎ. ನಾಲ್ಕನೆ ಸೆಮಿಸ್ಟರ್ ಪಠ್ಯವಾಗಿದೆ.
ರೋಹಿತ್ ರಾಜಣ್ಣ ಅವರು ‘ವಿಜಯ ಟೈಮ್ಸ್’ ಮತ್ತು ಟೈಮ್ಸ್ ಆಫ್ ಇಂಡಿಯಾ’ದಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಅಕಾಲಿಕವಾಗಿ ನಿಧನರಾದ ಮಗನ ಸ್ಮರಣಾರ್ಥ ಅವರ ತಂದೆ ರಾಜಣ್ಣ ಅವರು ರೋಹಿತ್ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿದ್ದಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಚ್.ಆರ್. ಶ್ರೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296