ರೋಣ: ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಗದಗ ಜಿಲ್ಲಾ ಉಸ್ತುವಾರಿ ಮಹೇಶಕುಮಾರ ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಈ ಸಮಾರಂಭದಲ್ಲಿ ಹಲವಾರು ಪತ್ರಕರ್ತರು ಹಾಗೂ ಸ್ಥಳೀಯ ವರದಿಗಾರರು ಭಾಗವಹಿಸಿದ್ದರು. ಸಂಘದ ಚಟುವಟಿಕೆಗಳನ್ನು ಬಲಪಡಿಸಲು ಹಾಗೂ ಅದರ ವಿಸ್ತರಣೆಗೆ ಅನುಕೂಲವಾಗುವಂತೆ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಿದಾಗ, ಭಾಗವಹಿಸಿದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಮತ್ತು ಮುಂದಿನ ಹಂತಗಳನ್ನು ತಲುಪಲು ಹೆಚ್ಚಿನ ಸಹಕಾರವನ್ನು ಅವಶ್ಯಕತೆ ಎಂದು ಅಭಿಪ್ರಾಯಪಟ್ಟರು.
ನೂತನ ಪದಾಧಿಕಾರಿಗಳು:
ತಾಲೂಕು ಅಧ್ಯಕ್ಷ: ಅಂದಪ್ಪ ಮಾದರ
ಉಪಾಧ್ಯಕ್ಷ: ಎಸ್.ವಿ. ಸಂಕನಗೌಡ
ಪ್ರಧಾನ ಕಾರ್ಯದರ್ಶಿ: ಮಂಜುನಾಥ್ ಹೂವಿನಹಾಳ
ಸಂಘಟನಾ ಕಾರ್ಯದರ್ಶಿ: ಕನಕಪ್ಪ ಕೊತಬಾಳ
ಖಜಾಂಚಿ: ಶಿವರಾಜ್ ಹುಲ್ಲೂರು
ಕಾರ್ಯಕಾರಿ ಸದಸ್ಯರು: ಲಿಂಗರಾಜ ತಳ್ಳಿಹಾಳ, ರಮೇಶ ನಂದಿ, ಅಭಿಷೇಕ ಕೊಪ್ಪದ, ಶರಣಪ್ಪ ಸಂಗನಾಳ, ಶಿವಯೋಗಪ್ಪ ಬಾವಿ, ಶರಣಪ್ಪಗೌಡ ಸಕ್ಕರಗೌಡ ಆಯ್ಕೆಯಾದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx