ಕೆಲ ಸಮಯದಿಂದ ದೇಶದಲ್ಲಿ ಅಕ್ಕಿ ಬೆಲೆ ಭಾರೀ ಏರಿಕೆ ಕಂಡಿದ್ದು ಜನತೆಗೆ, ಬಡ-ಬಗ್ಗರಿಗೆ ತುಂಬಾ ಕಷ್ಟವಾಗುತ್ತಿತ್ತು. ಆದರೀಗ ಏಕಾಏಕಿ ಎನ್ನುವಂತೆ ಗಗನಕ್ಕೇರಿದ್ದ ಅಕ್ಕಿ ದರದಲ್ಲಿ ಭರ್ಜರಿ 10 ರೂ ಇಳಿಕೆಯಾಗಿದೆ.
ಹೌದು, ಅಕ್ಕಿದರ ಸ್ವಲ್ಪ ಇಳಿಕೆ ಕಂಡಿದ್ದು ಸ್ಟೀಮ್ ರೈಸ್ ದರ ಕಡಿಮೆಯಾಗಿದೆ. ಬೇಡಿಕೆಯ ರಾ ರೈಸ್ ದರ ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ. ಸದ್ಯ ಇದೀಗ ಬೇಸಿಗೆ ಬೆಳೆ ಬಂದಿರುವುದರಿಂದ ಅಕ್ಕಿದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಸ್ಟೀಮ್ ರೈಸ್ ದರ ಕೆಜಿಗೆ 8 ರೂಪಾಯಿವರೆಗೆ ಕಡಿಮೆಯಾಗಿದೆ. ಕಳೆದ ಫೆಬ್ರವರಿಯಲ್ಲಿ ಆರ್.ಎನ್.ಆರ್. ಸ್ಟೀಮ್ ರೈಸ್ ದರ ಕೆಜಿಗೆ 57 -58 ರೂ. ಇತ್ತು. ಈಗ 48 -49 ರೂಪಾಯಿ ಇದೆ. ಸೋನಾ ಸ್ಟೀಮ್ ರೈಸ್ ದರ ಕೆಜಿಗೆ 56 ರೂ. ನಿಂದ 47 ರೂ.ಗೆ ಇಳಿಕೆಯಾಗಿದೆ. ರಾ ರೈಸ್ ದರ 55 -57 ರೂ. ಇದೆ.
ಇನ್ನು ಈ ಬೆಲೆ ಇಳಿಕೆ ಬೆನ್ನಲ್ಲೇ, ಇದು ತಾತ್ಕಾಲಿಕ ಎನ್ನುವ ಸುದ್ದಿ ಕೂಡ ಹೊರಬಿದ್ದಿದೆ. ಜೊತಗೆ ಜನರು ಹೆಚ್ಚಾಗಿ ಸ್ಟೀಮ್ ರೈಸ್ ಬಳಸುವುದಿಲ್ಲ, ಹೋಟೆಲ್ ನವರಿಗೆ ಮಾತ್ರ ಇದು ಉಪಯುಕ್ತವಾಗುವುದು ಎಂಬುದನ್ನು ಕೂಡ ಮರೆಯಬಾರದು.
ದಿಢೀರ್ ಬೆಲೆ ಇಳಿಕೆಗೆ ಕಾರಣವೇನು?
ಇದೀಗ ಕುಯ್ಲು ಶುರುವಾದ ಕಾರಣ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಿಂದ ಹೊಸ ಭತ್ತ ಬಂದಿದೆ. ಜೊತೆಗೆ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಉತ್ಪಾದನೆಯಾಗಿದ್ದು, ಅಗ್ಗದ ಬೆಲೆಗೆ ಭಾರತ್ ರೈಸ್ ಕೂಡ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಅಲ್ಲದೆ, ಅಕ್ಕಿ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ. ಜೊತೆಗೆ ಚುನಾವಣೆ ಕೂಡ ಹತ್ತಿರವಾಗಿದೆ. ಈ ಕಾರಣಗಳಿಂದ ಅಕ್ಕಿ ದರ ಕೊಂಚ ಕಡಿಮೆಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296