ತಿಪಟೂರು: ತಾಲ್ಲೂಕಿನ ರಂಗಾಪುರ ವಲಯದ ಬನ್ನೀಹಳ್ಳಿ ಹಾಲಿನ ಡೈರಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ.2 ಲಕ್ಷ ಮೊತ್ತದ ಡಿ ಡಿ ಮಂಜೂರಾಗಿದ್ದು ತಾಲ್ಲೂಕಿನ ಯೋಜನಾಧಿಕಾರಿ ಉದಯ್ ಕೆ. ಶುಭಹಾರೈಸಿ ಗ್ರಾಮಸ್ಥರಿಗೆ ಡಿಡಿ ವಿತರಿಸಿದರು.
ಈ ಸಂಧರ್ಭದಲ್ಲಿ ಬನ್ನಿಹಳ್ಳಿ ಹಾಲು ಒಕ್ಕೂಟ ಸಹಕಾರ ಸಂಘದ ಅಧ್ಯಕ್ಷರಾದ ಪರಮೇಶ್ವರಯ್ಯ, ನಿರ್ದೇಶಕರಾದ ಬಿ.ಎಮ್.ಶಶಿಧರ್, ಮಂಜುನಾಥಸ್ವಾಮಿ, ಕುಮಾರಸ್ವಾಮಿ, ಬಿ.ಎಸ್.ಉಮೇಶ್, ರವಿಕುಮಾರ್, ನಾಗರಾಜು ಮುಖ್ಯಕಾರ್ಯನಿರ್ವಾಹಕರಾದ ಬಿ.ಎಮ್.ಪ್ರಕಾಶ್, ಹಾಲು ಪರೀಕ್ಷಕರಾದ ಬಿ.ಎಸ್.ಕಲ್ಯಾಣ್ ಕುಮಾರ್, ವಲಯ ಮೇಲ್ವಿಚಾರಕ ದಿನೇಶ್, ಸೇವಾಪ್ರತಿನಿಧಿ ಪ್ರೀತಿ ಸಂಘದ ಪಾಲುದಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC