ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ಕೊರಟಗೆರೆ : ಇಲ್ಲಿನ ಪಟ್ಟಣ ಪಂಚಾಯಿತಿಯ 2025–26ನೇ ಸಾಲಿಗೆ ಒಟ್ಟು 9.7ಲಕ್ಷ.ರೂ ಉಳಿತಾಯ ಬಜೆಟ್‍ನ್ನು ಪ.ಪಂ. ಅಧ್ಯಕ್ಷೆ ಅನಿತಾ ಮಂಡಿಸಿದರು.
ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಆಯವ್ಯಯ ಸಭೆಯಲ್ಲಿ ಅಧ್ಯಕ್ಷೆ ಅನಿತಾ ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದಾರೆ. 2025–26ನೇ ಸಾಲಿನಲ್ಲಿ 21.43ಕೋಟಿ.ರೂ ಹಣ ಜಮೆ ಆಗಲಿದೆ. ಇದರಲ್ಲಿ 21.34ಕೋಟಿ ರೂ ಖರ್ಚು ತಗಲಿದೆ. ಹೀಗಾಗಿ 9.7ಲಕ್ಷ.ರೂ ಉಳಿತಾಯವಾಗಲಿದೆ. ಪಟ್ಟಣ ಪಂಚಾಯಿತಿ ಆದಾಯ ಹೆಚ್ಚಿಸುವುದರೊಂದಿಗೆ ಅಭಿವೃದ್ಧಿಗೆ ಆಧ್ಯತೆ ನೀಡಿರುವ ಬಜೆಟ್ ನಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಲಾಗಿದೆ.
ಆಸ್ತಿ ತೆರಿಗೆ 1.24ಕೋಟಿ.ರೂ, ನೀರಿನ ತೆರಿಗೆ 40 ಲಕ್ಷ.ರೂ, ಹೊಸ ನಲ್ಲಿ ಸಂಪರ್ಕ ಪೀ 3.60ಲಕ್ಷ.ರೂ, ಮಳಿಗೆಗಳ ಬಾಡಿಗೆ 15ಲಕ್ಷ ರೂ., ಕಟ್ಟಡಗಳ ಪರವಾನಿಗೆ ಶುಲ್ಕ 20ಲಕ್ಷ.ರೂ, ಉದ್ದಿಮೆ ಪರವಾನಿಗೆ ಶುಲ್ಕ 6.20ಲಕ್ಷ.ರೂ ಹಾಗೂ ಇನ್ನಿತರ ಮೂಲಗಳಿಂದ 50.72ಲಕ್ಷ ರೂ, ಸಂಗ್ರಹಿಸಲಾಗಿದೆ ಎಂದು ಬಜೆಟ್ ನಲ್ಲಿ ತಿಳಿಸಿದ್ದಾರೆ.
ಸರ್ಕಾರದ ಅನುದಾನಗಳಾದ 2025–26ನೇ ಸಾಲಿನ ವೇತನ ಅನುದಾನ 19.41ಕೋಟಿ.ರೂ, ಎಸ್.ಎಫ್.ಸಿ. ಮುಕ್ತನಿಧಿ ಅನುದಾನ 4ಲಕ್ಷ, ವಿದ್ಯುತ್ ಅನುದಾನ 1.23 ಕೋಟಿ.ರೂ ಹಂಚಿಕೆಯಾಗಿದೆ. 45 ವರ್ಷ ಮೇಲ್ಪಟ್ಟ ಕಾರ್ಯನಿರತ ಪರ್ತಕರ್ತರ ಆರೋಗ್ಯ ವಿಮೆಗೆ 5ಲಕ್ಷ ಹಣವನ್ನು ಮೀಸಲಿಟ್ಟಿದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್ ಗಳ ಅಭಿವೃದ್ಧಿಗೆ ಸದಸ್ಯರ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ವಾರ್ಡ್‍ಗಳ ಅಭಿವೃದ್ಧಿ ಹಾಗೂ ಜನರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವದರ ಬಗ್ಗೆ ಬಜೆಟ್‍ನಲ್ಲಿ ತಿಳಿಸಿದ್ದಾರೆ.
ಈ ವೇಳೆ ಪ.ಪಂ. ಉಪಾಧ್ಯಕ್ಷೆ ಉಸ್ನಾಫಾರಿಯಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಮಂಜುನಾಥ್, ಸದಸ್ಯರಾದ ಕಾವ್ಯಶ್ರೀ, ನಂದೀಶ್, ನಟರಾಜ್, ನಾಗರಾಜು, ಎ.ಡಿ.ಬಲರಾಮಯ್ಯ, ಪುಟ್ಟನರಸಪ್ಪ, ಭಾಗ್ಯಮ್ಮ, ಲಕ್ಷ್ಮೀನಾರಾಯಣ್, ಕೆ.ಆರ್ ಓಬಳರಾಜು, ಪ್ರದೀಪ್ ಕುಮಾರ್, ಮಂಜುಳಾ, ಭಾರತಿ ಸಿದ್ದಮಲ್ಲಪ್ಪ, ನಾಮಿನಿ ಸದಸ್ಯರಾದ ಮಂಜುಳ ಗೋವಿಂದರಾಜು, ಫಯಾಜ್ ಅಹಮದ್, ಎಂ.ಜಿ ಸುಧೀರ್ ಸೇರಿದಂತೆ ಇತರರು ಇದ್ದರು.
2025–26ನೇ ಸಾಲಿನ ಪ.ಪಂ ಅಧ್ಯಕ್ಷರು ಉಳಿತಾಯ ಬಜೆಟ್ ನ್ನು ಮಂಡಿಸಿದ್ದು, ಪಟ್ಟಣದ ಅಭಿವೃದ್ಧಿಯ ಬಜೆಟ್ ಇದಾಗಿದ್ದು, ಸುವರ್ಣ ಮುಖಿ ನದಿ ಕಾಲುವೆಗೆ ಸೇರುತ್ತಿರುವ ತ್ಯಾಜ್ಯ ವಸ್ತುಗಳನ್ನು ನಿಯಂತ್ರಿಸಲು ಸ್ವಚ್ಛ ಸುವರ್ಣ ಮುಖಿ ಅಭಿಯಾನವನ್ನು ಆರಂಭಿಸಿ ಸ್ವಚ್ಛತೆಗೆ 3 ಲಕ್ಷ ಹಣವನ್ನು ಮೀಸಲಿಟ್ಟಿದ್ದು, ಗೃಹ ಸಚಿವರ ಸೂಚನೆಯಂತೆ ಪರ್ತಕರ್ತರ ಆರೋಗ್ಯ ವಿಮೆಗೆ 5 ಲಕ್ಷ ಹಣವನ್ನು ಮೀಸಲಿರಿಸಲಾಗಿದೆ.
— ಉಮೇಶ್ ಕೆ.ಎಸ್., ಪ.ಪಂ ಮುಖ್ಯಾಧಿಕಾರಿ.ಕೊರಟಗೆರೆ.
ಗೃಹ ಸಚಿವ ಡಾ.ಜಿ ಪರಮೇಶ್ವರ್ ಶಿಫಾರಸ್ಸಿನಂತೆ ಪ.ಪಂ ಆಯವ್ಯಯ ಬಜೆಟ್‍ನಲ್ಲಿ ಪರ್ತಕರ್ತರ ಆರೋಗ್ಯ ವಿಮೆಗೆ 5ಲಕ್ಷ ಹಣ ಮೀಸಲಿರಿಸಿದೆ. 45 ವರ್ಷ ಮೇಲ್ಪಟ್ಟ ಪರ್ತಕರ್ತರಿಗೆ ಈ ವಿಮೆ ಅನ್ವಯವಾಗುವುದರಿಂದ, ಮಾರ್ಗಸೂಚಿಗಳನ್ನು ಕೈಬಿಟ್ಟು ಎಲ್ಲಾ ಪರ್ತಕರ್ತರಿಗೂ ಆರೋಗ್ಯ ವಿಮೆ ಸಿಗುವಂತಾಗಬೇಕು. ಗ್ರಾಮೀಣ ಭಾಗದ ಪರ್ತಕರ್ತರಿಗೂ ಸೌಲಭ್ಯ ದೊರೆಯಬೇಕು. ಪರ್ತಕರ್ತರ ಸಂಕಷ್ಟಕ್ಕೆ ನೆರವಾದ ಪಟ್ಟಣ ಪಂಚಾಯಿತಿಗೆ ಕಾರ್ಯನಿರತ ಪರ್ತಕರ್ತರ ಸಂಘದಿಂದ ಧನ್ಯವಾದ ತಿಳಿಸಲು ಬಯಸುತ್ತೇವೆ.
— ಕೆ.ವಿ ಪುರುಷೋತ್ತಮ್, ಅಧ್ಯಕ್ಷರು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ. ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4