ಬೆಂಗಳೂರು: ಎಂದು ಆರ್ ಎಸ್ ಎಸ್ ನ ಪ್ರಾರ್ಥನೆ ಮಾಡಿದ್ದು, ತಪ್ಪಾಗಿದ್ದರೆ ಪಕ್ಷದ ಕಾರ್ಯಕರ್ತರು, ಮುಖಂಡರು, ಇಂಡಿಯಾ ರಾಜಕೀಯ ಕೂಟದ ಮುಖಂಡರ ಕ್ಷಮೆ ಕೇಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದ ಕುರಿತು ಚರ್ಚೆ ನಡೆಯುತ್ತಿದ್ದಾಗ ನಾನು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಅವರ ಹಿನ್ನೆಲೆಯನ್ನು ಹೇಳುವ ಸಲುವಾಗಿ ನಮಸ್ತೆ ಸದಾ ವತ್ಸಲೆ ಎಂದು ಹಾಡಿದ್ದೇನೆ. ಇದರಲ್ಲಿ ಆರ್ ಎಸ್ ಎಸ್ ಅನ್ನು ಹೊಗಳುವ ಉದ್ದೇಶ ಇರಲಿಲ್ಲ ಎಂದಿದ್ದಾರೆ.
ನನ್ನ ಜೀವನ ಕಾಂಗ್ರೆಸ್ ಕಾರ್ಯಕರ್ತರ ಬದುಕಿಗೆ ಮೆಟ್ಟಿಲು ಆಗಬೇಕೆ ಹೊರತು, ಭಾವನೆಗಳಿಗೆ ಧಕ್ಕೆಯಾಗಬಾರದು. ನಮ ಪಕ್ಷದ ಹಿರಿಯ ನಾಯಕರುಗಳು ದೊಡ್ಡ ದೊಡ್ಡ ಸಲಹೆಗಳನ್ನು ನೀಡಿದ್ದಾರೆ. ಅದನ್ನು ಗೌರವಿಸುತ್ತೇನೆ. ಆದರೆ ಮಾಧ್ಯಮಗಳಲ್ಲಿ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನೇರವಾಗಿ ಕಾಂಗ್ರೆಸ್ ಕಚೇರಿಗೆ ಬನ್ನಿ, ಸಭೆ ಮಾಡಿ ಚರ್ಚಿಸಿ ಎಂದು ಮನವಿ ಮಾಡಿದರು.
ಎಲ್ಲರಿಗಿಂತ ದೊಡ್ಡವನೆಂಬ ಭಾವನೆ ನನಗೆ ಇಲ್ಲ. ಯಾರೇ ಸಲಹೆ ನೀಡಿದ್ದರೂ ಸ್ವೀಕರಿಸುತ್ತೇನೆ. ಹಲವಾರು ಬಾರಿ ನನ್ನ ತಪ್ಪುಗಳನ್ನು ತಿದ್ದಿದ್ದಾರೆ. ನಾನು ಗಾಂಧಿ ಪರಿವಾರದ ಮೇಲೆ ನಿಷ್ಠೆ ಇರುವವನು. ಮಲ್ಲಿಕಾರ್ಜುನ್ ಖರ್ಗೆ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದೇನೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


