ಬೆಂಗಳೂರು:ಮಾಜಿ ಪ್ರಧಾನಿ ನೆಹರು ಅವರ 58ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರ್ ಎಸ್ ಎಸ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆರ್ ಎಸ್ ಎಸ್ ನವರು ಮೂಲತಃ ಭಾರತೀಯರೇ ಎಂದು ಪ್ರಶ್ನಿಸುವ ಮೂಲಕ ವಿವಾದದ ಸುಳಿಗೆ ಸಿಲುಕಿದ್ದು, ನಾನು ಇಷ್ಟು ದಿನ ಈ ವಿಷಯ ಚರ್ಚಿಸಬಾರದು ಎಂದಿದ್ದೆ. ಆರ್ಯರು ಭಾರತೀಯರಲ್ಲ. ಮಧ್ಯಪ್ರಾಚ್ಯದಿಂದ ಬಂದವರು. ದ್ರಾವಿಡರು ಇಲ್ಲಿನ ಮೂಲ ನಿವಾಸಿಗಳು ಎಂದು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ನೆಹರು ಮತ್ತು ಹಾಲಿ ಪ್ರಧಾನಿ ಮೋದಿಗೆ ಹೋಲಿಕೆ ಸರಿಯಲ್ಲ. ಇಬ್ಬರ ನಡುವೆ ಆಕಾಶ, ಭೂಮಿಯಷ್ಟು ಅಂತರವಿದೆ. ನೆಹರು ಅವರು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದರು. ಮೋದಿ ಆ ಜಾಗದಲ್ಲಿ ನೀತಿ ಆಯೋಗ ಹೆಸರಿನಲ್ಲಿ ಇತಿಹಾಸ ಅಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಧಾನಿಯಾಗಿ ಮೋದಿ 8 ವರ್ಷ ಪೂರೈಸಿದ್ದಾರೆ. ಅವರ ಸಾಧನೆ ಏನು ಎಂಬುದು ಗೊತ್ತಿಲ್ಲ. ಪ್ರಜಾಪ್ರಭುತ್ವದ ಬೇರನ್ನೇ ಕೀಳುತ್ತಿದ್ದಾರೆ. ಮೋದಿಗಿಂತಲೂ ನೆಹರು ಅವರಿಗೆ ಹೆಚ್ಚಿನ ಸಂಖ್ಯಾಬಲ ಇತ್ತು. ಆದರೆ, ಅವರು ಪ್ರಜಾಸತ್ತಾತ್ಮಕ ಆಡಳಿತ ನಡೆಸಿದರು. ಐಐಟಿ, ಏಮ್ಸ್ ಸೇರಿದಂತೆ ಹಲವು ಸಂಸ್ಥೆಗಳನ್ನು ಸ್ಥಾಪಿಸಿದರು. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದರು ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB