ಉದ್ಯೋಗ ಖಾತ್ರಿ ಯೋಜನೆ ಕೃಷಿ ಕಾರ್ಮಿಕರು ಹಾಗೂ ರೈತರಿಗೆ ಅನುಕೂಲವಾಗಲಿ ಎಂದೂ ಸರ್ಕಾರ ಜಾರಿಗೆತಂದಿತ್ತು, ಆದರೆ ಕಾರ್ಮಿಕರಿಗೆ ಉದ್ಯೋಗ ನೀಡದೆ ಯಂತ್ರಗಳಿಂದ ಮಾಡಿಸುತ್ತಿದ್ದಾರೆ. ಇತ್ತೀಚೆಗೆ ಐ.ಡಿ. ಹಳ್ಳಿ ಪಂಚಾಯತಿ ಕೆರೆ ಹೂಳು ಎತ್ತಲು ಕಾರ್ಮಿಕರಿಗೆ ಆದ್ಯತೆ ನೀಡಿದರಿಂದ ಇಲ್ಲಿ ಹೆಚ್ಚು ಮಹಿಳಾ ಕಾರ್ಮಿಕರು ಕಾಳಜಿಯಿಂದ ಮಾಡುತ್ತಿರುವುದು ಕಂಡು ಬಂದಿದೆ, ಎಲ್ಲಾ ಕಡೆ ಕೆರೆ — ಕಟ್ಟೆ ಹೂಳು ಎತ್ತುವ ಕೆಲಸ ನೀಡಿದ್ದರು ಆದರೆ ಕಾರ್ಮಿಕರಿಗೆ ಕೆಲಸ ನೀಡದೆ . ಯಂತ್ರದಿಂದ (ಜೆ.ಸಿ.ಬಿ.) ಮಾಡಿಸುವ ಹಣ ರುಚಿ ನೋಡಿರುವ ಗುತ್ತಿಗೆದಾರರಿಗೆ ನೀಡುತ್ತಿರುವುದರಿಂದ ನರೇಗ ಯೋಜನೆ ಹಳ್ಳ ಹಿಡಿಸುತ್ತಿರುವುದು ಯಾರು ಎಂಬುದು ಗಮನಿಸಿದವರಿಗೆ ತಿಳಿಯುತ್ತದೆ.
ಇನ್ನು ನರೇಗ. ಯೋಜನೆ ರೈತರಿಗೆ ಆದ್ಯತೆ ನೀಡುವುದರಿಂದ ಕೃಷಿಯಲ್ಲಿ ನಷ್ಟ ಹೊಂದಿದವರು, ಈ ಯೋಜನೆಯಲ್ಲಿ ಸುಧಾರಣೆ ಆಗಲಿ ಎಂದರೆ ಇದರಲೂ ರೈತರಿಗೆ ಆದ್ಯತೆ ನೀಡದೆ, ನರೇಗ ಯೋಜನೆಯಲ್ಲಿ ಹಣ ರುಚಿ ನೋಡಿರುವ ಗುತ್ತಿಗೆದಾರರು ಕೆಲಸದ ಒತ್ತಡದಿಂದ ಇರುವ ಜಮೀನ್ದಾರರ ಜಮೀನಿನಲ್ಲಿ, ನರೇಗ ಯೋಜನೆ ಬಗ್ಗೆ ಅರಿವು ಇಲ್ಲದ ರೈತರ ಜಮೀನನಲ್ಲಿ ಬದು ಹಾಕಿಸುವುದು ಹಾಗೂ ಇತರೆ ಕೆಲಸಗಳನ್ನು ಗುತ್ತಿಗೆದಾರರೇ ಮಾಡಿಸಿ ರೈತರಿಗೆ ಸ್ವಲ್ಪ ಹಣ ನೀಡಿ ಉಳಿಕೆ ಹಣ ತಾವು ಪಡೆದು, ಇನ್ನು ಉಳಿದ ಹಣವನ್ನು ಯಾರು ಯಾರಿಗೆ % ನೀಡುವುದು ಇದೆ ಎಂಬ ಮಾತು ರೈತರಿಂದ ಕೇಳಿ ಬಂದಿದೆ.
ಗುತ್ತಿಗೆದಾರರು ಮಾಡಿಸುವ ರೈತರ ಕೆಲಸಗಳಿಗೆ ಹೆಚ್ಚು ಹಣ ಹಾಕುತ್ತಾರೆ ಎಂಬುದನ್ನು ಪ್ರಜ್ಞಾವಂತ ರೈತರಿಂದಲೇ ಕೇಳಿ ಬರುತ್ತದೆ. ಉದಾ: ಅರ್ಧ ಎಕರೆ ಅಥವ ಒಂದು ಎಕರೆ ಇರುವ ಜಮೀನುಗಳಿಗೆ ಸರ್ಕಾರದ ನಿಯಮ ಪ್ರಕಾರ 8 ಸಾವಿರ ಅಥವ 9 ಸಾವಿರ ಹಾಕಬಹುದು. ಆದರೆ ಗುತ್ತಿಗೆದಾರರ ಕೈಚಳಕದಿಂದ 40 ಸಾವಿರ ಅಥವ 50 ಸಾವಿರ ರೂಪಾಯಿಗಳು ಬಿಡುಗಡೆ ಆಗುತ್ತದೆ ಎಂದು ಹೇಳಲಾಗಿದೆ.
ನರೇಗ ಯೋಜನೆ ಅಕ್ರಮಗಳು ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ಬಾರದೆ ಇರುತ್ತದಾ ಎಂಬುದು ನಾಗರಿಕರ ಪ್ರಶ್ನೆಯಾಗಿದೆ. ನಾಗರಿಕರು ಇಂತದ ಅಕ್ರಮಗಳ ಬಗ್ಗೆ ದೂರು ಬಂದಾಗ ತಪ್ಪು ಮಾಡುವ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳದೆ ಇದ್ದರೆ, ಈ ಅಧಿಕಾರಿಗಳಿಗೆ ಸಹ ಇದರಲ್ಲಿ ಪಾಲು ಇದೆ ಎಂಬ ಸಂದೇಶ ಸಾರ್ವಜನಿಕರಿಗೆ ನೀಡಿದಂತೆ ಆಗುತ್ತದೆ.
ನರೇಗ ಯೋಜನೆ ಅಧಿಕಾರಿಗಳಿಗೂ ಹಾಗೂ ಗುತ್ತಿಗೆದಾರರ ಪಾಲು ಆಗಿ ನರೇಗ ಯೋಜನೆ ಹಳ್ಳ ಹಿಡಿಯುವಲ್ಲಿ ಸಂಶಯ ಇಲ್ಲ ಎಂಬ ಮಾತು ಪ್ರಜ್ಞಾವಂತ ರೈತರಿಂದ ಕೇಳಿ ಬಂದಿದೆ. ನರೇಗ ಯೋಜನೆ ಪ್ರಗತಿಯ ಬಗೆ ಸರ್ಕಾರ ಗಮನ ನೀಡುವ ಅವಶ್ಯಕತೆ ಇದೆ ಎಂಬುದು ನಾಗರಿಕರ ಆಶಯ ಆಗಿದೆ..
N.S. ಈಶ್ವರಪ್ರಸಾದ್.
ನೇರಳೇಕೆರೆ. ಮಧುಗಿರಿ ತಾಲ್ಲೂಕ್