ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ ಸುಧೀರ್ ಕುಮಾರ್ ಚೌಧರಿ ಯಾರಿಗೆ ಗೊತ್ತಿಲ್ಲ ಹೇಳಿ. ಸಚಿನ್ ನಿವೃತ್ತಿಯಾಗುವವರೆಗೂ ಟೀಂ ಇಂಡಿಯಾ ಆಡುವ ಪ್ರತಿಯೊಂದು ಪಂದ್ಯದಲ್ಲೂ ಸುಧೀರ್ ಸ್ಟ್ಯಾಂಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ದೇಶ – ವಿದೇಶ ಎಂಬ ಬೇಧವಿಲ್ಲದೇ ಸಚಿನ್ ಬ್ಯಾಟಿಂಗ್ ನೋಡುಲು ಆಸ್ತಿಗಳನ್ನ ಮಾರಿಕೊಂಡು ಸುಧೀರ್ ಮೈದಾನಕ್ಕೆ ಬರುತ್ತಿದ್ದರು. ಕೆಲವು ಸಂದರ್ಭಗಳಲ್ಲಿ, ಬಿಸಿಸಿಐ ಸುಧೀರ್ ಗೆ ಪಂದ್ಯಗಳನ್ನು ವೀಕ್ಷಿಸಲು ವಿಶೇಷ ರಿಯಾಯಿತಿಗಳನ್ನು ನೀಡಿದ ಉದಾಹರಣೆಗಳು ಕೂಡ ಇವೆ.
ಇತ್ತ ಸಚಿನ್ ಕೂಡ ಸುಧೀರ್ ಬಗ್ಗೆ ತುಂಬಾ ಗೌರವ ಹೊಂದಿದ್ದರು. ಅನೇಕ ಸಂದರ್ಭಗಳಲ್ಲಿ ಅವರನ್ನು ಗೌರವಿಸುವುದರ ಜೊತೆಗೆ ಅವರ ಅಗತ್ಯಗಳನ್ನು ಪೂರೈಸಿದ್ದರು. ವಿದೇಶದಲ್ಲಿ ನಡೆಯುವ ಪಂದ್ಯಾವಳಿ ವೀಕ್ಷಿಸಲು ಬರುವ ಸುಧೀರ್ ಖರ್ಚುವೆಚ್ಚಗಳನ್ನ ಸಚಿನ್ ಭರಿಸಿದ್ದಾರೆ.ಸಚಿನ್ ಅವರನ್ನು ದೇವರ ಸಮಾನ ಎಂದು ಪೂಜಿಸುವ ಸುಧೀರ್ ಮೊದಲ ಬಾರಿಗೆ ಕ್ರಿಕೆಟ್ ಅಲ್ಲದ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಬಿಹಾರದ ಮುಜಾಫರ್‌ಪುರ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕೇಸ್ ಒಂದರ ವಿಚಾರವಾಗಿ ಸುಧೀರ್ ಸಹೋದರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಇದನ್ನ ತಿಳಿದ ಸುಧೀರ್, ತಮ್ಮನ್ನು ನೋಡಲು ಠಾಣೆಗೆ ಹೋಗಿದ್ದರಂತೆ. ಈ ವೇಳೆ ಅಲ್ಲಿನ ಸಿಬ್ಬಂದಿ ಸುಧೀರ್ ಅವರನ್ನು ನಿಂದಿಸಿದ್ದಲ್ಲದೇ ಕಾಲಿನಲ್ಲಿ ಒದ್ದು ಹೊರಗಾಕಿದ್ದಾರಂತೆ. ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಸುಧೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy