ಸರಗೂರು: ಸಕಾಲಕ್ಕೆ 10 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಕಛೇರಿಯಿಂದ ಸಾರ್ವಜನಿಕರ ಆಸ್ಪತ್ರೆವರೆಗೆ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಭಾಗಿಯಾಗಿ ಮೆರವಣಿಗೆ ಮೂಲಕ ಜಾಥಾ ನಡೆಸುವ ಮೂಲಕ ದಶಮಾನೋತ್ಸವ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ಚಲುವರಾಜು, ಸಕಾಲ 10 ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದಶಮಾನೋತ್ಸವದ ಅಂಗವಾಗಿ ಜನರಿಗೆ ಸಕಾಲದ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದು, ಎಲ್ಲಾ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಹಕಾರ ಪಡೆದು ಸಕಾಲ ಜಾಥಾ ಮತ್ತು ಮೆರವಣಿಗೆ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದು ತಿಳಿಸಿದರು.
ಸಕಾಲ 2.0 ಅಡಿಯಲ್ಲಿ ಹೊಸ ಕಾರ್ಯಕ್ರಮ
ಸಕಾಲ ಮೇಲ್ಮನವಿ ಕುರಿತು ಸಂದೇಶ: ಸಕಾಲದಡಿ ಅರ್ಜಿ ಸಲ್ಲಿಸಿದ ನಾಗರಿಕರ ಅರ್ಜಿಗಳು ವಿಲೇವಾರಿ ವಿಳಂಬವಾದಲ್ಲಿ ಅಥವಾ ತಿರಸ್ಕೃತವಾದಲ್ಲಿ ಮೇಲ್ಮನವಿ ಅವಕಾಶ ಲಭ್ಯವಿರುವ ಬಗ್ಗೆ ನಾಗರಿಕರಿಗೆ ಎಸ್ ಎಮ್ ಎಸ್ ಸಂದೇಶ ಕಳುಹಿಸಲ್ಪಡುತ್ತದೆ.ಸಕಾಲದಲ್ಲಿ ಮೇಲ್ಮನವಿ ಹೆಚ್ಚಿಸಲು ಈ ಕ್ರಮವನ್ನು ಜಾರಿಗೆ ತರಲಾಗಿದೆ.
Tesz ನಲ್ಲಿ ಸಕಾಲ: ಸರ್ಕಾರ ದಿಂದ ನಾಗರಿಕರಿಗೆ ಒದಗಿಸಲಾಗುವ ವಿವಿಧ ಸೇವೆಗಳು ಕುರಿತು ನಾಗರೀಕರಿಗೆ ಉದ್ಬವಾಗಬಾಹುದಾದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಸಕಾಲವನ್ನು tesz ವೇದಿಕೆ ಯಲ್ಲಿ ಅಳವಡಿಸವಾಗಿದೆ .ಕಳೆದ 11 ತಿಂಗಳನಲ್ಲಿ ಸುಮಾರು 1.36.029 ನಾಗರೀಕರು ಇದರ ಲಾಭವನ್ನು ಪಡೆದಿರುತ್ತಾರೆ ಹಾಗೂ 4.164 ನಾಗರೀಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.ಸಕಾಲ ಈ ವೇದಿಕೆಯಡಿಯಲ್ಲಿ ಪ್ರಶಸ್ತಿಯನ್ನು ಪಡೆದಿದೆ.
ಮೂಲಕ ಪರಿಹಾರ ವೆಚ್ಚ ಪಾವತಿ: ನಾಗರಿಕರು ಸಕಾಲ ಸೇವೆಗಳ ವಿಳಂಬ ವಿಲೇವಾರಿಗೆ ಪರಿಹಾರ ವೆಚ್ಚ ಕೋರಿ ಮೇಲ್ಮನವಿ ಸಲ್ಲಿಸಿದಲ್ಲಿ ಆಯಾ ಇಲಾಖೆಯ ಸಕಾಲ ನೋಡಲ್ ಅಧಿಕಾರಿಗಳು DBT ಮೂಲಕ ನಾಗರೀಕರ ಬ್ಯಾಂಕ್ ಖಾತೆಗೆ ಯಾವುದೇ ವಿಳಂಬನಿಲ್ಲದಂತೆ ಪರಿಹಾರ ವೆಚ್ಚವನ್ನು ಪಾವತಿಸುತ್ತಾರೆ.
ಸಕಾಲ ಮಿತ್ರ: ನಾಗರಿಕರಲ್ಲಿ ಸಕಾಲ ಕುರಿತು ಅರಿವು ಮೂಡಿಸುವ ಸಲುವಾಗಿ ಒಂದು ಸರ್ಕಾರೇತರ ಸಂಸ್ಥೆಯ ಜೊತೆಗೂಡಿ ವಿವಿಧ ಶೈಕ್ಷಣಿಕ ಸಂಸ್ಥೆಗಳ ವಿರ್ಧ್ಯಾಥಿಗಳು ಮನೆ ಮನೆಗೆ ಭೇಟಿ ನೀಡಿ ನಾಗರಿಕರಿಗೆ ಸಕಾಲ ಯೋಜನೆ ಕುರಿತು ಮಾಹಿತಿ ನೀಡುವ “ಸಕಾಲ ಮಿತ್ರ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ “ಸಕಾಲ ಮಿತ್ರ”ರ ಮುಖೇನ ನಾಗರೀಕರ ಅಗತ್ಯತೆ ಅಧ್ಯಯನವನ್ನು ಸಹ ನಡೆಸಲಾಗುತ್ತಿದೆ.
ಸಕಾಲ ಸಿಟಿಜನ್ ಹ್ಯಾಪಿನೆಸ್ ಇಂಡೆಕ್ಸ್: ನಾಗರಿಕ ಸೇವೆಗಳ ವಿಲೇವಾರಿಯಲ್ಲಿ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಪೈಲಟ್ ಆಧಾರದಲ್ಲಿ ಈ ಕಾರ್ಯಕ್ರಮ ವನ್ನು ಜಾರಿಗೆ ತರಲಾಗಿದೆ. ಜನವರಿ 2022 ಮಾಹೆಯಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಶೇ 97.59 ನಾಗರಿಕರು ಸಕಾಲ ಕುರಿತು ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಸಕಾಲ ಇಂಟರ್ನ್ ಶಿಪ್ ಕಾರ್ಯಕ್ರಮ: ಪದವಿಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ದೇಶದ ಅತಿ ದೊಡ್ಡ ಸೇವಿ ವಿಲೇವಾರಿ ವ್ಯವಸ್ಥೆ ಬಗ್ಗೆ ತಿಳಿಯಲು ಹಾಗೂ ಈ ವ್ಯವಸ್ಥೆಗೆ ತಮ್ಮ ಕೊಡುಗೆ ನೀಡಲು ಸಾಕಾಲ ಮಿಷನ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಹೆಸರು ಹೊಂದಾಣಿಕೆ ತಂತ್ರಜ್ಞಾನ: ನಾಗರಿಕರು ಬಿಬಿಎಮ್ಪಿ ಖಾತೆ ವರ್ಗಾವಣೆ ಸೇವೆಗೆ ಅರ್ಜಿ ಸಲ್ಲಿಸಲು ವೇಳೆ ಅರ್ಜಿದಾರರು ಹೆಸರನ್ನು ಆಧಾರ್ ಕಾರ್ಡ್ ನಲ್ಲಿರುವ ಹೆಸರಿನೊಂದಿಗೆ ಹೊಂದಾಣಿಕೆ ಮಾಡಲಾಗುವುದು. ಇದರಿಂದ ಮೂರನೇ ವ್ಯಕ್ತಿಗೆ ಹಸ್ತಕ್ಷೇಪ ತಡೆಗಟ್ಟಬಹುದಾಗಿದೆ.
ಸಕಾಲ ಸಮನ್ವಯ ಸಮಿತಿ: ಸಕಾಲದಡಿ ಬಾಕಿ ಉಳಿಕೆ. ತಿರಸ್ಕೃತಿ ಶೂನ್ಯ ಸ್ವೀಕೃತಿ ಕಚೇರಿಗಳು ಮತ್ತು ನಿಗದಿತ ಕಾಲಮಿತಿಯಲ್ಲಿ ಸೇವೆ ವಿಲೇವಾರಿಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಎಲ್ಲಾ ಜಿಲ್ಲೇಗಳಲ್ಲಿ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ ಸಂಬಂಧಪಟ್ಟ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಗಳು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಚಲುವರಾಜು. ಉಪತಹಶೀಲ್ದಾರ್ ಸುನೀಲ್. ಕಲೀಲ್ ಪಾಷ. ಶೀರದ್ತಾರ್ ಗುರುರಾಜು, ಹರೀಶ್, ಆರ್ ಐ ಮುಜೀಫ್, ರವಿಚಂದ್ರ, ಶ್ರೀನಿವಾಸ್, ಪ.ಪಂ. ಆರ್ ಐ ರಾಮು, ವಿ ಎ ಕುಮಾರ್, ಪೋಲಿಸ್ ಇಲಾಖೆಯವರು ಎಎಸ್ ಐ ಗೊವಿಂದ, ವಿವಿಧ ಅಧಿಕಾರಿಗಳು ಜಾಥಾದಲ್ಲಿ ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5