ಹಾಸನ: ಸಾಲದ ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಬಲವಂತವಾಗಿ ಮದ್ಯ ಕುಡಿಸಿ , ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹೊಳೆನರಸೀಪುರ ತಾಲೂಕು ಪರಸನಹಳ್ಳಿಯಲ್ಲಿ ಎಂಬಲ್ಲಿ ನಡೆದಿದೆ.
ಪರಸನಹಳ್ಳಿ ಗ್ರಾಮದ ನಂಜೇಗೌಡ ಎಂಬವರು ತಮ್ಮ ಪಕ್ಕದ ಬಂಡಿಹಳ್ಳಿ ಗ್ರಾಮದ ಶಿವಶಂಕರ ಅವರಿಗೆ ಮನೆ ಕಟ್ಟಲು 1.43 ಲಕ್ಷ ರೂ. ಸಾಲ ಕೊಟ್ಟಿದ್ದರು. ಇವರು ಕೊಟ್ಟ ಸಾಲವನ್ನು ವಾಪಸ್ ಕೊಡುವಂತೆ ಶಿವಶಂಕರ ಅವರ ಮನೆಯ ಹತ್ತಿರ ಹೋಗಿ ಕೇಳಿದ್ದರು.
ಆದರೆ ಶಿವಶಂಕರ ಅವರ ತಾಯಿ ಭಾಗ್ಯಮ್ಮ ಮತ್ತು ಅವರ ಹೆಂಡತಿ ರೇಣುಕಾ ಎಂಬವರು ಹಣ ಕೊಡುತ್ತೇವೆ ಎಂದು ಉಪಾಯದಿಂದ ನಂಜೇಗೌಡ ಅವರನ್ನು ಮನೆ ಒಳಗೆ ಕರೆದು ಬಾಗಿಲು ಹಾಕಿಕೊಂಡು ಮದ್ಯ ಕುಡಿಸಿ ದೊಣ್ಣೆಯಿಂದ ಹೊಡೆದಿದ್ದಾರೆ.
ನಂಜೇಗೌಡರವರು ಮನೆಗೆ ವಾಪಸ್ ಬರದೆ ಇದ್ದಾಗ ಅವರ ಮಗ ಗಂಗಾಧರ ಮತ್ತು ಕಲ್ಲೇನಹಳ್ಳಿ ಸುನಿಲ್ ಎಂಬುವರು ಶಿವಶಂಕರ ಅವರ ಮನೆಯ ಹತ್ತಿರ ನೋಡಿದಾಗ ನಂಜೇಗೌಡರು ರಕ್ತಸ್ರಾವದಿಂದ ಬಿದ್ದು ಒದ್ದಾಡುತ್ತಿದ್ದರು. ಮಗ ಗಂಗಾಧರನ ಬಳಿ ಆರೋಪಿಗಳು ಹಲ್ಲೆ ನಡೆಸಿದ ವಿಷಯ ತಿಳಿಸಿ ಜೀವ ಬಿಟ್ಟರು ಎಂದು ಶಾಂತಿಗ್ರಾಮ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy