ತುಮಕೂರು: ಬೆಳಧರ ಶಾಲೆಯ ಆಟದ ಮೈದಾನವನ್ನು ಉಳಿಸುವಲ್ಲಿ ನಿರ್ಲಕ್ಷ್ಯ ತೋರಿರುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ.ಸೂರ್ಯ ಕಲಾ ಹಾಗೂ ಉಪ ನಿರ್ದೇಶಕರ ಭತ್ಯೆ ಹಾಗೂ ಇನ್ನಿತರ ವೇತನವನ್ನು ಶಾಲಾ ಆಟದ ಮೈದಾನಕ್ಕೆ ಕಾಂಪೌಂಡ್ ಗೋಡೆ ನಿರ್ಮಿಸುವ ವರೆಗೂ ತಡೆಹಿಡಿಯ ಬೇಕೆಂದು ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮತ್ತು ಸಂಘಟನೆ ಸದಸ್ಯರೆಲ್ಲರೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಪ್ರಭು ಜಿ. ಅವರಿಗೆ ಮನವಿ ಸಲ್ಲಿಸಿದರು.
ಇದಕ್ಕೆ ತಕ್ಷಣವೇ ಸ್ಪಂದಿಸಿದಂತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಪ್ರಭು ಜಿ. ಅವರು, ನಾಳೆಯಿಂದಲೇ ಕೆಲಸ ಪ್ರಾರಂಭ ಮಾಡಿ ಶಾಲೆಯ ಆವರಣಕ್ಕೆ ಶಾಸಕರ ಅನುದಾನದಿಂದ ಬಿಡುಗಡೆಯಾದ 5 ಲಕ್ಷ ರೂ. ಗಳನ್ನು ಬಳಸಿಕೊಂಡು ಶಾಲಾ ಆಟದ ಮೈದಾನಕ್ಕೆ ತಂತಿ ಬೇಲಿಯನ್ನು ನಿರ್ಮಿಸಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಮೌಖಿಕವಾಗಿ ನಿರ್ದೇಶನ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, ಶಾಲೆಯ ಆಸ್ತಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ, ನಾವು ಶಾಲೆಯ ಆಟದ ಮೈದಾನಕ್ಕೆ ಬೇಲಿಯನ್ನು ತಕ್ಷಣವೇ ನಿರ್ಮಿಸಿಕೊಡುತ್ತೇವೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು. ಎಸ್ ಡಿಎಂಸಿ ಅಧ್ಯಕ್ಷರಾದ ರಫೀಕ್ ಪಾಷಾ ಅವರು ಕೂಡ ಶಾಲಾ ಆಸ್ತಿ ಉಳಿಸಬೇಕೆಂದು ಮತ್ತೊಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಳಜಿ ಫೌಂಡೇಶನ್ ನ ಮಧುಗಿರಿ ಮಹೇಶ್ ಅವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.