ತಿಪಟೂರು: ತಾಲ್ಲೂಕು ಕೆರೆಗೋಡಿ ರಂಗಾಪುರ ದಲ್ಲಿ ಶಾಲೆಗೆ ಮಕ್ಕಳು ಬರುವ ಮೊದಲ ದಿನ ಸ್ವಚ್ಛ ಪರಿಸರ ಹಾಗೂ ಸುಂದರ ವಾತಾವರಣವಿರಲಿ ಎಂಬ ಉದ್ದೇಶದಿಂದ ಶಿಕ್ಷಣ ಸಚಿವರು ಜನತೆಗೆ ಕರೆ ನೀಡಿರುವುದು ಉತ್ತಮ ಕಾರ್ಯವಾಗಿದೆ ಎಂದು ರಂಗಾಪುರ ಸುಕ್ಷೇತ್ರ ಅಧ್ಯಕ್ಷರು ಶ್ರೀ ಗುರು ಪರದೇಶಿ ಕೇಂದ್ರ ಸ್ವಾಮೀಜಿಗಳು ತಿಳಿಸಿದರು.
ರಂಗಾಪುರ ಪ್ರಾಥಮಿಕ ಶಾಲೆಯನ್ನು ಸ್ವಚ್ಛಗೊಳಿಸುವ ಮೂಲಕ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಬಿ.ಸಿ. ನಾಗೇಶ್ ಮಾತನಾಡಿ, ದೇಶದಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಳ ಓಡಿಸುತ್ತಿರುವ ಮೊದಲ ರಾಜ್ಯ ಕರ್ನಾಟಕ ಎಂದರು.
ಕಳೆದ ಎರಡು ವರ್ಷಗಳಿಂದ ಕರೋನಾ ಕಾರಣಕ್ಕೆ ಶಾಲೆಗಳು ಸರಿಯಾಗಿ ನಡೆಯದೆ ಮಕ್ಕಳ ಕಲಿಕೆ ಪೂರ್ಣವಾಗಿ ಇರಲಿಲ್ಲ ಆದಕಾರಣ ವಿಶೇಷವಾಗಿ ಕಲಿಕಾ ಚೇತರಿಕೆಯ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದೇವೆ. ಈ ವರ್ಷದ ಸಿಲಬಸ್ ನಲ್ಲೂ ಸ್ವಲ್ಪ ಕಡಿಮೆ ಮಾಡಿ ಅದನ್ನು ಮುಂದಿನ ವರ್ಷ ಪ್ರಾರಂಭದಲ್ಲಿ ಬೋಧಿಸಿ ಬೋಧಿಸಿ ಪೂರ್ಣಗೊಳಿಸಲಾಗುವುದು ಎಂದರು ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭುಸ್ವಾಮಿ ರಂಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರೂಪ ಹರೀಶ್ ಉಪಾಧ್ಯಕ್ಷ ಇಂದ್ರಾಣಿ ಹಾಗೂ ಗ್ರಾಮಸ್ಥರು ಶಾಲಾ ಮುಖ್ಯ ಶಿಕ್ಷಕರು ಹಾಜರಿದ್ದರು.