ಸಮುದಾಯಭವನಗಳ ಅಭಿವೃದ್ಧಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುತ್ತಿದ್ದು ಅನುದಾನದ ಸಮರ್ಪಕ ವಿನಿಯೋಗದ ಮೂಲಕ ಸಮುದಾಯಭವನಗಳು ಸಮಾಜದ ಜನರ ಸತ್ಕಾರ್ಯಗಳಿಗೆ ಬಳಕೆಯಾಗಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ತಾಲೂಕಿನ ಮಾಸ್ತಮರ್ಡಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಸಮುದಾಯ ಭವನ ಕಟ್ಟಡ ನಿರ್ಮಾಣದ ಸಲುವಾಗಿ 3 ಲಕ್ಷ ರೂ.ಗಳ ಪೈಕಿ ಈಗಾಗಲೇ ಮೊದಲನೇ ಹಂತದ ಚೆಕ್ ನ್ನು ನೀಡಲಾಗಿದ್ದು, ಇಂದು ಕೊನೆಯ ಹಂತದ ಚೆಕ್ ನ್ನು ದೇವಸ್ಥಾನದ ಕಮಿಟಿಯವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಈ ಸಮಯದಲ್ಲಿ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಖಂಡರಾದ ಗಂಗಣ್ಣ ಕಲ್ಲೂರ, ಪ್ರಕಾಶ ಪಾಟೀಲ, ಅಶೋಕ ತೋರ್ಲೆ, ದೇವಸ್ಥಾನದ ಕಮಿಟಿಯ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz