ತಿಪಟೂರು: ತಾಲೂಕಿನ ಗಾಂಧಿ ನಗರ ಭಾಗದಲ್ಲಿ ಗಣೇಶೋತ್ಸವ ಪ್ರಯುಕ್ತ ಸುಮಾರು 50ಕ್ಕೂ ಅಧಿಕ ಗಣೇಶನ ವಿಗ್ರಹಗಳನ್ನು ಸ್ಥಾಪಿಸಲಾಗಿತ್ತು. ಮೂರ್ತಿ ಪ್ರತಿಷ್ಠಾಪನೆಗೊಂಡು 5ನೇ ದಿನವಾದ ಸೋಮವಾರ ಸಡಗರದಿಂದ ಉತ್ಸವ ನಡೆಸಲಾಯಿತು.
ಗಾಂಧಿ ನಗರದ ಮುಖ್ಯ ರಸ್ತೆಗಳಲ್ಲಿ ನೂರಾರು ಯುವಕರು ವಿವಿಧ ಸಾಂಸ್ಕೃತಿಕ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ 50ಕ್ಕೂ ಹೆಚ್ಚು ಸಾಮೂಹಿಕ ಗಣಪತಿಗಳ ವಿಗ್ರಹಗಳಿದ್ದವು.
ಗಾಂಧಿನಗರ ಭಾಗವು ಅತಿ ಸೂಕ್ಷ್ಮ ಪ್ರದೇಶವಾದ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಶಹಪುರವಾಡ್ ರವರು ಸಹ ಭಾಗಿಯಾಗಿದ್ದು ಯಾವುದೇ ರೀತಿಯ ಗಲಭೆಗೆ ಅವಕಾಶ ನೀಡದೆ ಉತ್ಸವವನ್ನು ಅದ್ದೂರಿಯಾಗಿ ನಡೆಸಲಾಯಿತು.
ಉತ್ಸವದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನಗರಸಭಾ ಅಧ್ಯಕ್ಷ ರಾಮ್ ಮೋಹನ್, ನಗರಸಭಾ ಪೌರಾಯುಕ್ತ ಉಮಾಕಾಂತ್ ಮತ್ತಿತರರು ಭಾಗಿಯಾಗಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy