ತುಮಕೂರು: ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಡಾ.ಅಂಬೇಡ್ಕರ್ ರಸ್ತೆಯಲ್ಲಿ ತುಮಕೂರು ಜಿಲ್ಲೆಯ ದಲಿತ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಸಂವಿಧಾನ ಸಮರ್ಪಣೆ ದಿನಾಚರಣೆ ನಡೆಯಿತು.
ತುಮಕೂರು ತಾಲ್ಲೂಕಿನ ತಹಶೀಲ್ದಾರ್ ಮೋಹನ್ ಕುಮಾರ್ ರವರು ಸಂವಿಧಾನ ಸಮರ್ಪಣೆ ಪೀಠಿಕೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಸಂವಿಧಾನ ಪೀಠಿಕೆಗೆ ನಮನಗಳನ್ನು ಸಲ್ಲಿಸಿದರು.
ದಲಿತ ಸಂಘಟನೆಗಳ ಮುಖಂಡರು ಸಂವಿಧಾನದ ಪೀಠಿಕೆ ಓದುವುದು ಈ ಕಾರ್ಯಕ್ರಮದಲ್ಲಿ ವಿನೂತನವಾಗಿದ್ದು, ಸಂವಿಧಾನ ಉಳಿವಿಗಾಗಿ ಎಲ್ಲರೂ ಹೋರಾಟ ನಡೆಸಲು ಪ್ರಮಾಣ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೂಟ್ಟ ಶಂಕರ್ ರವರು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಬಾಲ್ಯದ ದಿನಗಳಲ್ಲಿ ಹಲವಾರು ರೀತಿಯಲ್ಲಿ ಶೋಷಣೆ ಅವಮಾನಗಳನ್ನು ಅನುಭವಿಸಿ ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡುವ ಮೂಲಕ ಕರುಡು ಸಮಿತಿಯ ಸದಸ್ಯರಾಗಿ ದೇಶದಲ್ಲಿ ಅಸ್ಪೃಶ್ಯತೆ ಅಸಮಾನತೆ ಹೋಗಲಾಡಿಸಿ ಸಮಾನತೆಯ ದೃಷ್ಟಿಯಿಂದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ದೊರೆಯುವ ಸಲುವಾಗಿಯೇ ಸಂವಿಧಾನ ರಚಿಸಿದ್ದಾರೆ ಎಂದರು.
ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ದೊರೆಯುವಂತೆ ಮಾಡುವುದಕ್ಕಾಗಿ 1949ನೇಯ ಇಸವಿಯ ನವಂಬರ್ ತಿಂಗಳ 26ನೇ ದಿನದಂದು ಭಾರತದ ಸಂಸತ್ತಿನಲ್ಲಿ ಅವರು ಬರೆದಂತಹ ಸಂವಿಧಾನವನ್ನು ಅರ್ಪಿಸುವ ಮೂಲಕ ಈ ದೇಶದಲ್ಲಿ ಸಮಾನತೆಯನ್ನು ಸಾರಿದ್ದಾರೆ . ಅಂತಹ ಪವಿತ್ರವಾದ ಸಂವಿಧಾನವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿ ಕೈಗಳು ಸಂವಿಧಾನವನ್ನು ಅಳಿಸುವ ಸಂಚು ಮಾಡಲು ಯತ್ನಿಸುತ್ತಿದ್ದಾರೆ. ಆದರೆ ದೇಶದ ಹಿರಿಮೆಯನ್ನು ಸಾರುವಂತ ಸಂವಿಧಾನವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ಒಟ್ಟಾಗಿ ಹೋರಾಟ ಮಾಡುವ ಅನಿವಾರ್ಯತೆ ನಮ್ಮ ಮುಂದಿದೆ ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ರಂಗಯ್ಯ, ಭಾನುಪ್ರಕಾಶ್, ವೀರುಪಾಕ್ಷ್, ಗೂಳುರು ರಾಜಣ್ಣ, ಟಿ.ಸಿ. ರಾಮಯ್ಯ , ಜೆ.ಸಿ.ಬಿ.ವೆಂಕಟೇಶ್, ಯೋಗೀಶ್ ಮೇಳೇಕಲ್ಲಹಳ್ಳಿ, ಬಂಡೆ ಕುಮಾರ್, ಕೆಂಪರಾಜು, ಕೂರ ರಾಜಣ್ಣ, ಮಾರುತಿ ಪ್ರಸಾದ್, ನಟರಾಜ್, ರಾಮಮೂರ್ತಿ, ಕೌತಮಾರನಳ್ಳಿ ಶಿವರಾಜ್, ಛಲವಾದಿ ಶೇಖರ್, ಅಮರ್ ಟಿ.ಸಿ., ಸುರೇಶ್, ಕೂಡೆಯಾಲ ಮಹದೇವ್, ರಂಗಸ್ವಾಮಿ ಹಾಗೂ ಹಲವಾರು ದಲಿತ ಸಂಘಟನೆಯ ಮುಖಂಡರುಗಳು ಭಾಗವಹಿಸಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700