ತುಮಕೂರು: ನಗರದ ಜಿಲ್ಲಾ ಉಪ ನೋಂದಣಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಬೆರಳಚ್ಚುಗಾರರ ಸಂಘದ ಸದಸ್ಯರು ಇಂದು ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಉಪನೋಂದಣಾಧಿಕಾರಿಗಳಾದ ಸುಭಾಷ್ ಹೋಸಹಳ್ಳಿರವರು ಸಂವಿಧಾನದ ಪೀಠಿಕೆಗೆ ಪುಷ್ಪ ಗುಚ್ಛ ಅರ್ಪಿಸಿ ಮಾತನಾಡಿ, ಸಂವಿಧಾನ ಪ್ರತಿಯೊಬ್ಬ ನಾಗರಿಕರಿಗೆ ಸಮಾಜದಲ್ಲಿ ಬದುಕುವ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ ಸಮಾಜಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡದೆ ಪ್ರತಿಯೊಬ್ಬ ಮನುಷ್ಯನ ಬದುಕಿನ ಹಕ್ಕು ಸಾಮಾಜಿಕ ಹಕ್ಕು, ಸಮಾನತೆ ಮತ್ತು ಶೋಷಣೆ ಹಕ್ಕನ್ನು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ್ದಾರೆ ಇದನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುವಂತ ಕೆಲಸವಾಗಬೇಕು ಎಂದರು. ಇದೆ ಸಂದರ್ಭದಲ್ಲಿ ಬೆರಳಚ್ಚುಗಾರರ ಸಂಘದ ಸದಸ್ಯರು ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ದಲಿತ ಮುಖಂಡರಾದ ಜೆ.ಸಿ.ಪಿ. ವೆಂಕಟೇಶ್, ನಟರಾಜ್, ಮೇಳೇಕಲ್ಲಹಳ್ಳಿ ಯೋಗೀಶ್ ಭಾಗವಹಿಸಿದ್ದರು. ಬೆರಳಚ್ಚುಗಾರರ ಸಂಘದ ಗೌರವಧ್ಯಕ್ಷರಾದ ಪುಟ್ಟರಾಜು, ಅಧ್ಯಕ್ಷರಾದ ಗಂಗಾಧರ್, ಉಪಾಧ್ಯಕ್ಷರಾದ ಮಂಜುಳ, ಕಾರ್ಯದರ್ಶಿ ರಂಗನಾಥ್ ಕೆ., ಅಪ್ಪಾಜಿ ಗೌಡ್ರು, ಸಂಘಟನಾ ಕಾರ್ಯದರ್ಶಿ ಜಗದೀಶ್ ಸಿ.ಎನ್. ಖಜಾಂಚಿ ರಮೇಶ್ ಎಲ್ ., ಕೂಡಿಯಾಲ ಮಹಾದೇವ್ ಹಾಗು ಸಂಘದ ಇತರೆ ಎಲ್ಲಾ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700