ಚಿತ್ರದುರ್ಗ: ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಚಿತ್ರದುರ್ಗ ಜಿಲ್ಲಾ ಯುವ ಘಟಕದ ವತಿಯಿಂದ ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಚಿತ್ರದುರ್ಗ ತಾಲೂಕು ಯುವ ಘಟಕದ ಅಧ್ಯಕ್ಷರನ್ನಾಗಿ ಗೌತಮ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ರಾಮಚಂದ್ರ. ಕೆ. , ಸಂಘಟನೆ ಕೇವಲ ಐಡಿ ಕಾರ್ಡ್ ಗೆ ಮಾತ್ರ ಸೀಮಿತವಾಗಿರಬಾರದು. ಅಸ್ಪೃಶ್ಯತೆ, ಶೋಷಣೆ, ಅತ್ಯಾಚಾರಕ್ಕೊಳಗಾದವರ ಪರ ಹೋರಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೃಷಭೇಂದ್ರ ಬಾಬುರವರ ಮಾತನಾಡಿ, ಬಾಬಾಸಾಹೇಬರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬಾಬಾಸಾಹೇಬರ ವಿಚಾರಗಳನ್ನು ಕೈಗೆತ್ತಿಕೊಂಡು ಯುವಜನತೆ ನಮ್ಮ ದೇಶದ ಮಾದರಿಯಾಗಿ ಬೆಳೆಯಬೇಕು. ದಲಿತರ ಅಲ್ಪಸಂಖ್ಯಾತರ ಶೋಷಣೆಗೊಳಗಾದ ಪರವಾಗಿ ನಿಮ್ಮ ಹೋರಾಟಗಳು ನಡೆಯಬೇಕೆಂದು ನೂತನ ಪದಾಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಹಾಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ವೃಷಭೇಂದ್ರ ಬಾಬು, ಬಿಎಸ್ ಜಿಲ್ಲಾಧ್ಯಕ್ಷರಾದ ರೇವಣಸಿದ್ದಪ್ಪ ಬಿ. ಕಲ್ಕುಂಟೆ, ಜಿಲ್ಲಾ ಕಾರ್ಯದರ್ಶಿಯಾದ ಹನುಮಂತು ಎಸ್., ಹಿರಿಯೂರು ತಾಲೂಕು ಕಾರ್ಯ ಅಧ್ಯಕ್ಷರಾದ ರಾಘವೇಂದ್ರ ಆರ್., ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸಿಕಂದರ್, ಚಿತ್ರದುರ್ಗ ತಾಲೂಕು ಅಧ್ಯಕ್ಷರಾದ ಮೊಹಮ್ಮದ್ ರಫಿ., ಯುವ ಮುಖಂಡರುಗಳಾದ ಹಿಮಗಿರಿ ಸಂಜಯ್ ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್ ಚಿತ್ರದುರ್ಗ.