ಐಪಿಎಲ್ ನಲ್ಲಿ ರನ್ನರ್ ಅಪ್ ಆದ ರಾಜಸ್ಥಾನ್ ರಾಯಲ್ಸ್‍ನ ನಾಯಕ ಸಂಜು ಸಮ್ಸನ್‍ರ ಆಟದ ವೈಖರಿ ಕುರಿತು ವಿಶ್ವಕಪ್ ವಿಜೇತ ನಾಯಕ ಕಪಿಲ್‍ದೇವ್ ಅವರು ಕಿಡಿಕಾರಿದ್ದಾರೆ. ಸಂಜು ಸಮ್ಸನ್ ಅವರು ತಮ್ಮ ಬ್ಯಾಟಿಂಗ್ ನಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಎಡವುತ್ತಿರು ವುದರಿಂದ ಅವರು ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳಲು ಆಗುತ್ತಿಲ್ಲ ಎಂದ ಕಪಿಲ್‍ದೇವ್, ಐಪಿಎಲ್ 2022ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸಮರ್ಥವಾಗಿ ನಿಭಾಯಿಸಿದ ಸಂಜು ಸಮ್ಸನ್ 458 ರನ್ ಗಳನ್ನು ಗಳಿಸಿದರೂ ಕೂಡ ಅವರು ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಎಡವಿದ್ದರು. ಅವರು ಒಂದೆರಡು ಪಂದ್ಯಗಳಲ್ಲಿ ಗರಿಷ್ಠ ರನ್‍ಗಳನ್ನು ದಾಖಲಿಸಿದ್ದರಿಂದ ಅವರ ಅಷ್ಟೊಂದು ರನ್‍ಗಳನ್ನು ಗಳಿಸಲು ಸಾಧ್ಯವಾಯಿತಷ್ಟೇ ಎಂದು ಹೇಳಿದರು.
ಸಂಜು ಸಮ್ಸನ್ ಅವರು ಕಳೆದ ಕೆಲವು ವರ್ಷಗಳಿಂದ ಭಾರತ ತಂಡಕ್ಕೆ ಮರಳಲು ಪ್ರಯತ್ನಿಸುತ್ತಿದ್ದರಾದರೂ ಅವರು ಮೈದಾನದಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಬೆಂಚ್ ಕಾದಿದ್ದೇ ಹೆಚ್ಚು, ಶ್ರೀಲಂಕಾ ಸರಣಿಯಲ್ಲಿ ಸಂಜು ಸಮ್ಸನ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದಿದ್ದರಿಂದ ಅವರನ್ನು ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗಿಡಲಾಗಿದೆ ಎಂದರು.
2015ರಲ್ಲಿ ಟ್ವೆಂಟಿ-20 ಮಾದರಿ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಸಂಜು ಸಮ್ಸನ್ ಆಡಿರುವ 13 ಪಂದ್ಯಗಳಿಂದ 14.5 ಸರಾಸರಿಯಲ್ಲಿ 174 ರನ್‍ಗಳನ್ನು ಗಳಿಸಲಷ್ಟೇ ಶಕ್ತರಾಗಿದ್ದು 39 ಗರಿಷ್ಠ ರನ್ ದಾಖಲಿಸಿದ್ದಾರೆ.
ಸಮರ್ಥ ವಿಕೆಟ್‍ಕೀಪರ್:
ಸಂಜು ಸಮ್ಸನ್ ಅವರು ಒಬ್ಬ ಆಟಗಾರನಾಗಿ ಮಾತ್ರವಲ್ಲದೆ ವಿಕೆಟ್ ಕೀಪರ್ ಆಗಿಯೂ ಪಾತ್ರ ನಿಭಾಯಿಸಬಲ್ಲರು, ಆದರೆ ಸಂಜು ಸಮ್ಸನ್ ಬ್ಯಾಟಿಂಗ್ ಸ್ಥಿರತೆ ಕಾಪಾಡಿಕೊಳ್ಳಲು ಎಡವುತ್ತಿದ್ದರೆ, ಇವರಷ್ಟೇ ಅಲ್ಲ ಟೀಂ ಇಂಡಿಯಾದ ನಾಲ್ವರು ವಿಕೆಟ್ ಕೀಪರ್‍ಗಳು (ರಿಷಭ್‍ಪಂತ್, ದಿನೇಶ್ ಕಾರ್ತಿಕ್, ಇಶಾನ್‍ಕಿಶನ್) ಅವರು ಕೂಡ ಉತ್ತಮ ಬ್ಯಾಟ್ಸ್‍ಮನ್‍ಗಳಾಗಿದ್ದು, ಪಂದ್ಯಗಳನ್ನು ಗೆಲ್ಲಿಸಿಕೊಡುವ ಸಾಮಥ್ರ್ಯವನ್ನು ಹೊಂದಿದ್ದಾರೆ, ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ ಎಂದು ಹೇಳಿದರು.
ದಿನೇಶ್ ಕಾರ್ತಿಕ್ ಗುಣಗಾನ: ಭಾರತದ ವಿಕೆಟ್ ಕೀಪರ್‍ಗಳಿಗೆ ಹೋಲಿಸಿದರೆ ದಿನೇಶ್ ಕಾರ್ತಿಕ್ ಅವರು ಸಮರ್ಥ ಆಟಗಾರರಾಗಿದ್ದು ಸಂಜು ಸಮ್ಸನ್ ಮತ್ತು ಇಶಾನ್ ಕಿಶನ್‍ಗೆ ಹೋಲಿಸಿದರೆ ಬ್ಯಾಟಿಂಗ್ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಚಾಕಚಕ್ಯತೆ ಹೊಂದಿದ್ದಾರೆ ಎಂದು ಕಪಿಲ್‍ದೇವ್ ಹೇಳಿದರು.
ಯುವ ಆಟಗಾರ ಇಶಾನ್‍ಕಿಶನ್ ಐಪಿಎಲ್‍ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಲು ಅವರು ಪಡೆದಿದ್ದ ಕೋಟಿ ಸಂಭಾವನೆ ಮುಖ್ಯ ಕಾರಣವಾಗಿತ್ತು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz