ಸರಗೂರು: ಸರಗೂರು ಭಾಗದ ಜನರಿಗೆ ಸರಗೂರು ಬಸ್ ನಿಲ್ದಾಣದಲ್ಲಿಯೇ ಬಸ್ ಪಾಸ್ ನೀಡಬೇಕು ಎಂದು ವಿವಿದ್ದೋದ್ದೇಶ ಹಾಗೂ ಗ್ರಾಮೀಣ ನಗರ ಪುನರ್ವಸತಿ ತಾಲ್ಲೂಕು ಸಂಯೋಜಕರು ಜವರಾಜು ಮನವಿ ಮಾಡಿಕೊಂಡಿದ್ದಾರೆ.
ಸರಗೂರು ತಹಶೀಲ್ದಾರ್ ಚಲುವರಾಜು ಅವರಿಗೆ ಮನವಿ ಮಾಡಿರುವ ಅವರು, ಸರಗೂರು ನೂತನ ತಾಲೂಕಾಗಿದ್ದು, ಆದರೆ ಹೆಚ್.ಡಿ.ಕೋಟೆ ಬಸ್ ನಿಲ್ದಾಣದಲ್ಲಿ ಬಸ್ ಪಾಸ್ ನೀಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ತಾಲೂಕಿನಲ್ಲಿ ಸುಮಾರು 1,225 ವಿಕಲಚೇತನರಿದ್ದು, ಇವರೆಲ್ಲರೂ ಹೆಚ್.ಡಿ.ಕೋಟೆಗೆ ಹೋಗಿ ಬಸ್ ಪಾಸ್ ಪಡೆದುಕೊಳ್ಳುವುದು ಕಷ್ಟಕರವಾಗಿದೆ ಎಂದು ಜವರಾಜು ತಿಳಿಸಿದರು.
ಇನ್ನೂ ಉಪಾಧ್ಯಕ್ಷ ನಾಗರಾಜ್ ಸಾಗರೆ ಮಾತನಾಡಿ, ಸರಗೂರು ತಾಲ್ಲೂಕಿನಲ್ಲಿ ಅನೇಕ ಹಾಡಿ ಹಾಗೂ ಕಾಡಿನಂಚಿನ ಹಳ್ಳಿ ಪ್ರದೇಶಗಳಿದ್ದು. ಈ ಪ್ರದೇಶಗಳಿಂದ ಹೆಚ್.ಡಿ.ಕೋಟೆಗೆ ಬಸ್ ಪಾಸ್ ಗಾಗಿ ತೆರಳುವುದು ಕಷ್ಟಕರವಾಗಿದೆ. ಸರಗೂರು ನೂತನ ತಾಲೂಕಾದರೂ ಹೆಚ್.ಡಿ.ಕೋಟೆಯಲ್ಲಿ ಬಸ್ ಪಾಸ್ ವಿತರಿಸುವುದು ಸರಿಯಲ್ಲ. ಸರಗೂರು ಬಸ್ ನಿಲ್ದಾಣದಲ್ಲಿಯೇ ಬಸ್ ಪಾಸ್ ವಿತರಣೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಸವರಾಜು ಕಂದೇಗಾಲ, ಮೋಹನ್ ನಾಗೇಶ್, ಚಿನ್ನಸ್ವಾಮಿ, ಮನೋಮೂರ್ತಿ ಮತ್ತಿತರರು ಇದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy