ಸರಗೂರು: ಜುಲೈ 1ರಂದು ಬಿ.ಸಿ.ರಾಯ್ ರವರ ಜನ್ಮ ದಿನಾಚರಣೆ ಮತ್ತು ಮರಣ ಹೊಂದಿದ ದಿನ ಈ ದಿನವನ್ನು ನಾವು ವೈದ್ಯರ ದಿನಾಚರಣೆ ಎಂದು ಆಚರಣೆ ಮಾಡುತ್ತಿದ್ದೇವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಕಾಟವಾಳು ಹಾಡಿಯಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು, ಸಂಶೋಧನಾ ಸಂಸ್ಥೆ, ಮೈಸೂರು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಬಿ.ಮಟಕೆರೆ ಪುರ ಇವರ ಸಹಯೋಗದೊಂದಿಗೆ ಹಾಡಿಯಲ್ಲಿ ವೈದ್ಯರ ದಿನಾಚರಣೆ ಮತ್ತು ಜನರಿಗೆ ಸಿಕಲ್ ಸೆಲ್ ಅನೀಮಿಯ ಅರಿವು ಮೂಡಿಸುವ ಕಾರ್ಯ ಕ್ರಮವನ್ನು ಮಂಗಳವಾರ ದಂದು ಆಯೋಜಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಿ.ಸಿ.ರಾಯರವರು ವೈದ್ಯ ವೃತ್ತಿಯಲ್ಲಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಎಂದರು. ಸಿಕ್ಕಲ್ ಸೆಲ್ ಅನಿಮಿಯ ಕಾಯಿಲೆ ಎಂಬುದು ಕುಡುಗೋಲು ಅಥವಾ ಕುಡ್ಲು ಕಾಯಿದೆ ಎಂದು ಕರೆಯುತ್ತಾರೆ, ಈ ಕಾಯಿಲೆಯಲ್ಲಿ ಕೆಂಪು ರಕ್ತಕಣಗಳು ಕುಡುಗೋಲು ಆಕಾರಕ್ಕೆ ಪರಿವರ್ತನೆಗೊಂಡು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇದು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಒಂದು ಅನುವಂಶಿಕ ಕಾಯಿಲೆ ಆದರೂ ಆರೋಗ್ಯವಂತ ಪೋಷಕರಿಗೆ ಸಿಕಲ್ ಸೆಲ್ ಕಾಯಿಲೆ ಇರುವ ಮಕ್ಕಳು ಹುಟ್ಟಬಹುದು, ಪದೇ ಪದೇ ಜ್ವರ, ತೀವ್ರ ಮೂಳೆ ನೋವು, ತೀವ್ರ ಹೊಟ್ಟೆ ನೋವು, ಆಗಾಗ ಕಾಮಲೆ ರೋಗ, ರಕ್ತ ಹೀನತೆ, ವಾಸಿಯಾಗದ ಹುಣ್ಣುಗಳು, ಲಕ್ವಾ, ಈ ಲಕ್ಷಣಗಳು ಮಕ್ಕಳಲ್ಲಿ ಕಂಡುಬರುತ್ತವೆ ಎಂದು ಹೇಳಿದರು.
ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ಅಥವಾ ಸಂಬಂಧಿಕರಿಗೆ ಸಿಕ್ಕಲ್ ಸೆಲ್ ಕಾಯಿಲೆ ಇದ್ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆರೋಗ್ಯ ಸಿಬ್ಬಂದಿಯವರಿಂದ ರಕ್ತ ಪರೀಕ್ಷೆ ಮಾಡಿಸಿ ಪತ್ತೆ ಹಚ್ಚಬಹುದು. ಮಕ್ಕಳಿಗೆ ಸಿಕ್ಕಲ್ ಸೆಲ್ ಕಾಯಿಲೆ ಇದೆ ಎಂದು ದೃಢಪಡಿಸಿದಲ್ಲಿ ಎಲ್ಲಾ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ವ್ಯಕ್ತಪಡಿಸಿ ಗೆ ಒಳಪಡಿಸಿ ತಕ್ಕದ್ದು. ಬೇಗ ಕಂಡು ಹಿಡಿದ್ದಲ್ಲಿ ಸಿಕ್ಕಲ್ ಸೆಲ್ ಕಾಯಿಲೆ ಮಗುವಿನ ಜೀವನವನ್ನು ಉಳಿಸಿ, ಆರೋಗ್ಯವನ್ನು ಕಾಪಾಡಬಹುದು. ಸಿಕ್ಕಲ್ ಸೆಲ್ ಕಾಯಿಲೆಗೆ ಚಿಕಿತ್ಸೆ ಪಡೆಯದೆ ಕಡೆಗಣಿಸಿದಲ್ಲಿ ಜೀವಕ್ಕೆ ಅಪಾಯವಾಗಬಹುದು. ನಾವು ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನಲ್ಲಿ ಒಟ್ಟು 99 ರಷ್ಟು ರಕ್ತ ಪರೀಕ್ಷೆಯನ್ನು ಮಾಡಿದ್ದೇವೆ ಹಾಗೂ ಚಿಕಿತ್ಸೆ ಯನ್ನೂ ನೀಡಿದ್ದೇವೆ ಎಂದರು.
ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದು ಮತ್ತು ಆರೋಗ್ಯಕರ ಜೀವನ ಕಾಪಾಡಿಕೊಂಡಲ್ಲಿ ಕಾಯಿಲೆಯಿಂದ ಆಗುವ ತೊಂದರೆಯನ್ನು ತಪ್ಪಿಸಿಕೊಳ್ಳಿ ಎಂದು ತಿಳಿಸಿದರು.
ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪಡೆದುಕೊಳ್ಳಬೇಕು ಹೆಣ್ಣಿಗೆ 18 ವರ್ಷ ತುಂಬಿದ ನಂತರ ಮದುವೆ ಯಾನ್ನು ಮಾಡಬೇಕು, 18 ಕಿಂತ ಮುಂಚೆ ಮದುವೆ ಮಾಡಬಾರದು ಮಾಡಿದರೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಅವರಿಗೆ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.
ಎಲ್ಲಾ ಗ್ರಾಮಗಳಲ್ಲೂ ಸಿಕ್ಕಲ್ ಸೆಲ್ ಅನಿಮಿಯ ತಪಾಸಣೆಯನ್ನು ಮಾಡುತ್ತೇವೆ ಎಲ್ಲರೂ ಪರೀಕ್ಷಿಸಿ ಕೊಳ್ಳಿ, ರೋಗ ಪತ್ತೆಯಾದರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆಯನ್ನು ಪಡೆದುಕೊಳ್ಳಿ ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಕೇಕ್ ಅನ್ನು ಕಟ್ ಮಾಡಿ ಮಕ್ಕಳಿಗೆ ಸಿಹಿಯನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರುಕ್ಮಿಣಿ, ಎನ್.ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶೈಲೇಂದ್ರ, ಚಂದನ ಪ್ರೊಡಕ್ಟ್ ಸಂಸ್ಥೆಯ ವೈದ್ಯಾಧಿಕಾರಿ ಡಾ.ಅಖಿಲ, ಚಂದನ ಪ್ರಾಡಕ್ಟ್ ನ ಜಿಲ್ಲಾ ಸಂಯೋಜಕ ಗಂಗಾಧರ್, ಆರೋಗ್ಯ ನಿರೀಕ್ಷಣಾಧಿಕಾರಿ ರವಿರಾಜ್, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಂಚಾಲಕ ಪೂಜಾ, ನಾಗರಾಜು, ಸಿದ್ದರಾಜು, ಪುಟ್ಟ ಬಸಯ್ಯ, ಚಂದನ ಪ್ರಾಡಕ್ಟ್ ಸಿಬ್ಬಂದಿ ವರ್ಗದವರು.
ಹಾಡಿಯ ಮುಖಂಡರು, ಶಾಲೆಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲೆಯ ಮಕ್ಕಳು,ಹಾಡಿಯ ಜನರು, ಇನ್ನಿತರರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC