ಸರಗೂರು: ಬಡ ಕುಟುಂಬಗಳ ಶಿಕ್ಷಣ, ಆರ್ಥಿಕಾಭಿವೃದ್ಧಿಗೆ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ ಎಂದು ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ಭಾಸ್ಕರ್ ವಿ. ತಿಳಿಸಿದರು.
ತಾಲೂಕಿನ ಸಾಗರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಗರೆ ಹೊಸ ಕಾಲೋನಿಯಲ್ಲಿರುವ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಹಂಚಿಪುರ ಶಾಲೆಯ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾತನಾಡಿದರು.
ಜ್ಞಾನ ಸಾಕ್ಷ ರತಾ, ಜ್ಞಾನ ದೀಪ ಇಂತಹ ಯೋಜನೆಗಳ ಮೂಲಕ ಶಿಕ್ಷ ಣಕ್ಕೆ ಒತ್ತು ನೀಡಲಾಗಿದೆ. ಸ್ವಸಹಾಯ ಸಂಘದ ಸದಸ್ಯರಿದ್ದು ಅವರಲ್ಲಿ ಬಹಳಷ್ಟು ಮಂದಿಯ ಮಕ್ಕಳು ವೃತ್ತಿ ಶಿಕ್ಷ ಣ ಪಡೆಯುವುದಕ್ಕೆ ನೆರವು ಪಡೆಯುತ್ತಿದ್ದಾರೆ. ಇದರಿಂದ ಬಡ ಮಕ್ಕಳು ಸಹ ಉನ್ನತ ಶಿಕ್ಷ ಣ ಪಡೆದು ಒಳ್ಳೆಯ ಉದ್ಯೋಗ, ಸ್ಥಾನಮಾನ ಪಡೆಯುವುದಕ್ಕೆ ಸಾಧ್ಯವಾಗಲಿ ಎಂಬುದು ಯೋಜನೆಯ ಆಶಯವಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆ 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕೃಷಿ, ಮೂಲಸೌಲಭ್ಯ ಅಭಿವೃದ್ಧಿ ದೃಷ್ಟಿಯಲ್ಲಿ ಇಟ್ಟುಕೊಂಡು ಸ್ವ ಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 14.860 ಸ್ವಸಹಾಯ ಸಂಘಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
ಜ್ಞಾನದೀಪದ ಮೂಲಕ ಶಾಲಾ, ಕಾಲೇಜುಗಳಿಗೆ ಯೋಜನೆಯಿಂದ ಬೆಂಚ್ ಗಳನ್ನು ನೀಡಲಾಗಿದೆ. ಹಾಗೇ ಸ್ವಸಹಾಯ ಸಂಘಗಳ ಕೆಲ ಮಹಿಳೆಯರು ಸಹಿ ಹಾಕುವುದನ್ನು, ಓದಲು ಕಲಿತಿದ್ದಾರೆ. ಇದೆಲ್ಲ ಯೋಜನೆಯಿಂದ ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಷಣ್ಮುಖ , ಎಸ್ ಡಿಎಂಸಿ ಅಧ್ಯಕ್ಷ ಬೈರನಾಯಕ, ಹಾಗೂ ಹಂಚಿಪುರ ವಲಯ ಮೇಲ್ವಿಚಾರಕರಾದ ಸಲೀಮಾ, ಸೇವಾ ಪ್ರತಿನಿಧಿ ನಿಂಗರಾಜಮ್ಮ, ಪದ್ಮ ,ಶಾಲೆಯ ಸಹ ಶಿಕ್ಷಕರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


