ಸರಗೂರು : ಗ್ರಾಮ ದೇವತೆ ಶ್ರೀ ಕಾಳಿಕಾಂಬ ಮಹೇಶ್ವರಿ ಕಾಳಮ್ಮ ದೇವಿಯ ಜಾತ್ರೆ ಬುಧವಾರ ನಡೆಯಿತು. ಜಾತ್ರೆಯಲ್ಲಿ ಸಾವಿರಾರು ಭಕ್ತರು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.
ತಾಲ್ಲೂಕಿನ ಹೆಗ್ಗನೂರು ಗ್ರಾ.ಪಂ. ವ್ಯಾಪ್ತಿಯ ಹೆಗ್ಗನೂರು ಗ್ರಾಮದಲ್ಲಿ ಮಂಗಳವಾರ ಆರಂಭವಾದ ಜಾತ್ರೆಯ ಎರಡನೇ ದಿನವಾದ ಬುಧವಾರ ರಂದು ಬೆಳಿಗ್ಗೆಯಿಂದಲೇ ದೇವಿಗೆ ಜಾತ್ರೆಯ ದಿನದಂದು ದೇವಸ್ಥಾನದಲ್ಲಿ ವಿಶೇಷ ಹೋಮ, ಮುಂಜಾನೆ 5 ಗಂಟೆಗೆ ಸುಪ್ರಭಾತ ಸೇವೆ, ವಿಶೇಷ ಪಂಚಾಮೃತ ಅಭಿಷೇಕ 4 ಗಂಟೆಗೆ ಭಕ್ತಾದಿಗಳಿಂದ ಉರುಳು ಸೇವೆ ಮಾಡಿ, ಕ್ಷೇತ್ರದ ಈಶಾನ್ಯ ದಿಕ್ಕಿನಲ್ಲಿರುವ ಹೆಬ್ಬಳದ ತೊರೆಯಿಂದ ಗಂಗಾ ಪೂಜೆ ಮಾಡಿ, ನಂತರ ಅದೇ ದಿನದ 9 ಗಂಟೆಗೆ ಭಕ್ತಾದಿಗಳು ಬಾಯಿಬೀಗ ಹರಕೆ, ಮುಡಿ ಮುಗಿಸಿ ಸುತ್ತಿಗೆಗಳು, ನಂದಿಧ್ವಜ ಉಮಾ ಮಹೇಶ್ವರಸ್ವಾಮಿ ದೇವರ ರುದ್ರಾಕ್ಷಿ ಮಂಟಪದೊಂದಿಗೆ ಪೆಂಜಿನಸೇವೆ, ನಾದಸ್ವರ, ವಾದ್ಯಗೋಷ್ಠಿ, ಬ್ಯಾಂಡ್ ಸೆಟ್, ವೀರಗಾಸೆ ನೃತ್ಯ, ಗಾರುಡಿಗೊಂಬೆ, ಕೋಲಾಟ, ನೃತ್ಯವಾದ್ಯ, ಚಂಡಿವಾದ್ಯ, ಮಂಗಳವಾದ್ಯದ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ.ನಂತರ ಮದ್ಯಾಹ್ನ 12 ಗಂಟೆಗೆ ದೇವಾಲಯ ಸೇರಲಾಗುತ್ತದೆ. ನಂತರ ಉಯ್ಯಲೆಸೇವೆ ಮೂಲಕ ಗರ್ಭಗುಡಿ ಸೇರಿಸಿ ಪಟ್ಟಕ್ಕೆ ಕುಳಿತು ಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ, ಸಹಸ್ರನಾಮ, ಪೂರ್ಣಾಹುತಿ, ಮಂಗಳಾರತಿ ನೆರವೇರಿಸಲಾಗುತ್ತದೆ. ಮತ್ತೇ ರಾತ್ರಿ 1 ಗಂಟೆಗೆ ಗಂಗಾ ಪೂಜೆ ಮಾಡಿ ಮಹೇಶ್ವರಿ ಕಾಳಮ್ಮ ಉತ್ಸವಮೂರ್ತಿಯನ್ನು ಅಲಂಕರಿಸಿ ಅಲಂಕೃತಗೊಂಡ ಪುಷ್ಪ ರಥದಲ್ಲಿ ವಾದ್ಯಗೋಷ್ಠಿ ಸಮೇತ ರಾತ್ರಿಯಲ್ಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಉಡಿ ತುಂಬುವ, ಹರಕೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನದ ವೇಳೆಗೆ ವಿವಿಧ ಧಾರ್ಮಿಕ ವಿಧಿಗಳು ನಡೆದವು. ಇದೇ ವೇಳೆಗೆ ಭಕ್ತರ ಮೆರವಣಿಗೆಯೂ ನಡೆಯಿತು. ಮೆರವಣಿಗೆಯಲ್ಲಿ ತಂದು ಬನ್ನಿ ಕಾಳಮ್ಮ ದೇವಸ್ಥಾನದಲ್ಲಿ ಇರಿಸಿದರು.
ಸರಗೂರು ಪಟ್ಟದಿಂದ ಹೆಗ್ಗನೂರು ಗ್ರಾಮದ ಕಾಳಮ್ಮ ದೇವಸ್ಥಾನಕ್ಕೆ ಭಕ್ತಾಧಿಗಳಿಗೆ ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಗಿತ್ತು.
ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ನಾಯಕರು ದೇವಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಕಾಳಿಕಾಂಬ ಮಹೇಶ್ವರಿ ಕಾಳಮ್ಮ ಸೇವೆ ಟ್ರಸ್ಟ್ ಅಧ್ಯಕ್ಷ ಶಿವಣ್ಣೆಗೌಡ, ಗ್ರಾ.ಪಂ. ಅಧ್ಯಕ್ಷ ಸುಧೀರ್, ಸಮಿತಿ ಉಪಾಧ್ಯಕ್ಷ ಚಲುವೆಗೌಡ, ಎಚ್.ಕೆ.ಶಂಭುಲಿಯ್ಯ, ಕಾರ್ಯದರ್ಶಿ ಹಾಗೂ ವಕೀಲ ಸತೀಶ್ ಗೌಡ, ಖಂಜಾಚಿ ಹಾಗೂ ಪ್ರಾಂಶುಪಾಲ ರವಿಗೌಡ, ಸಹಕಾರ್ಯದರ್ಶಿ ಎಂ ಸಿ ಮೋಹನ್ ಕುಮಾರ್, ಟ್ರಸ್ಟ್ ಸದಸ್ಯರು ಗೋವಿಂದಗೌಡ, ಸೋಮೇಗೌಡ, ಮಾದಯ್ಯ, ಮಹದೇವಗೌಡ, ಎಚ್ ಸಿ ರವಿಗೌಡ, ಜಯರಾಮೇಗೌಡ, ಸಣ್ಣಕೂಸೇಗೌಡ, ಎಚ್.ಸಿ.ವೆಂಕಟಶಟ್ಟಿ, ಮಹದೇವೆಗೌಡ, ಮಾದೇಗೌಡ, ಸಲಹೆಗಾರರು ಶಿವಲಿಂಗೇಗೌಡ, ಸಣ್ಣಸ್ವಾಮಿ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296