ತುಮಕೂರು: ಜಿಲ್ಲೆಯಾದ್ಯಂತ ಬಿಡದೇ ಮಳೆ ಸುರಿಯುತ್ತಿದ್ದು, ಇದೇ ಸಂದರ್ಭದಲ್ಲಿತುಮಕೂರಿನ ಸರ್ಕಾರಿ ಚಿತ್ರಕಲಾ ಕಾಲೇಜು ಜಲಾವೃತವಾಗಿದ್ದು, ಮೊದಲೇ ಸರ್ಕಾರದ ನಿರ್ಲಕ್ಷ್ಯದಿಂದ ಶಿಥಿಲಾವಸ್ಥೆಗೆ ತಲುಪಿರುವ ಕಾಲೇಜಿನೊಳಗೆ ಮಳೆ ನೀರು ನುಗ್ಗಿ ಆತಂಕ ಸೃಷ್ಟಿಯಾಗಿದೆ.
ಕರ್ನಾಟಕ ರಾಜ್ಯದಲ್ಲಿ ಕೇವಲ ಎರಡೇ ಸರ್ಕಾರಿ ಚಿತ್ರಕಲಾ ಕಾಲೇಜುಗಳಿದ್ದು, ಇದರಲ್ಲಿ ತುಮಕೂರಿನ ಸರ್ಕಾರಿ ಚಿತ್ರಕಲಾ ಕಾಲೇಜು ಕೂಡ ಒಂದಾಗಿದೆ. ಈ ಕಾಲೇಜಿಗೆ ಕಳೆದ 27 ವರ್ಷಗಳಿಂದ ಮಾತೃ ಸಂಸ್ಥೆಯಾದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯಿಂದ ಸುಸಜ್ಜಿತ ಕಟ್ಟಡ ಮತ್ತು ನಿವೇಶನ ನೀಡದೇ, ನೂರಕ್ಕೂ ಹೆಚ್ಚು ವರ್ಷ ಹಳೆಯದಾದ ಶಿಥಿಲಾವಸ್ಥೆಯಲ್ಲಿರುವ ಸೈಕಲ್ ಸ್ಟ್ಯಾಂಡ್ ಕಟ್ಟಡವನ್ನು ಒದಗಿಸಿದೆ. ಶಿಥಿಲವಾದ ಕಟ್ಟಡದ ಹಂಚುಗಳು ಒಡೆದಿರುವುದರಿಂದ ಕಟ್ಟಡದ ಎಲ್ಲ ತರಗತಿಗಳು ಪ್ರಾಚಾರ್ಯರ ಕೊಠಡಿ ಸೇರಿದಂತೆ ಕಾಲೇಜಿನೊಳಗೆ ನೀರು ನುಗ್ಗಿದ್ದು, ಕಾಲೇಜಿನ ಹೊರ ಆವರಣ ಜಲಾವೃತವಾಗಿದೆ.
ಈ ಕಾಲೇಜು ಸರ್ಕಾರಿ ನಿವೇಶನದಲ್ಲಿದ್ದರೂಕಾಲೇಜನ್ನು ಅಭಿವೃದ್ಧಿಪಡಿಸುವ ಬಗ್ಗೆ ಸರ್ಕಾರ ಯಾವುದೇ ಗಮನ ಹರಿಸುತ್ತಿಲ್ಲ.ಚಿತ್ರ ಕಲಾ ಪದವಿ ಶಿಕ್ಷಣಕ್ಕೆ ಇಷ್ಟೊಂದು ನಿರ್ಲಕ್ಷ್ಯ ತೋರುತ್ತಿರುವುದರಕ್ಕೆ ಚಿತ್ರ ಕಲಾ ಕಾಲೇಜಿನಹಳೆಯ ವಿದ್ಯಾರ್ಥಿಗಳ ಸಂಘ ತೀವ್ರ ಬೇಸರ ವ್ಯಕ್ತಪಡಿಸಿದೆ.
ಈ ಕಟ್ಟಡದ ದುರಾವಸ್ಥೆಯಿಂದಾಗಿ ಕಾಲೇಜಿಗೆ ಪ್ರವೇಶ ಬಯಸಿ ಬರುವ ವಿದ್ಯಾರ್ಥಿಗಳ ಪ್ರವೇಶವನ್ನು ನಿರಾಕರಿಸುವಂತಹ ಸ್ಥಿತಿ ಉಂಟಾಗಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳ ಕಲಾ ಶಿಕ್ಷಣ ಪಡೆಯುವ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಈಗಲಾದರೂ ಜಿಲ್ಲಾಡಳಿತ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು. ತುಮಕೂರು ಸರ್ಕಾರಿ ಚಿತ್ರಕಲಾ ಕಾಲೇಜಿಗೆ ಸ್ವಂತ ನಿವೇಶನ ಮಂಜೂರು ಮಾಡಿ, ಸುಸಜ್ಜಿತ ಕಟ್ಟದ ನಿರ್ಮಿಸಿಕೊಡುವಂತೆ ಹಳೆಯ ವಿದ್ಯಾರ್ಥಿಗಳ ಸಂಘ ಒತ್ತಾಯಿಸಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700