ತುಮಕೂರು: ‘ಮಕ್ಕಳ ದಿನಾಚರಣೆ’ ಅಂಗವಾಗಿ ನಗರದ ಸರ್ಕಾರಿ ಚಿತ್ರಕಲಾ ಕಾಲೇಜಿನಲ್ಲಿ ಇಂದು ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಶ್ರೀನಿವಾಸಮೂರ್ತಿ ಟಿ. ವಿದ್ಯಾರ್ಥಿಗಳು ಕಲಿಯುವ ಕಾಲೇಜು ಆವರಣವನ್ನು ಹಳೆಯ ವಿದ್ಯಾರ್ಥಿಗಳು ತಮ್ಮ ರಜಾ ದಿನವನ್ನು ಉಪಯೋಗಿಸಿಕೊಂಡು ಶ್ರಮದಾನ ಮಾಡಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಇನ್ನೂ ಕಾಲೇಜಿನ ಪ್ರಾಂಶುಪಾಲರಾದ ಸಿ.ಸಿ.ಬಾರಕೇರ ಅವರು ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಬಗೆಗಿನ ಕಾಳಜಿ, ಅಭಿಮಾನ ಮತ್ತು ಗೌರವದಿಂದ ಇಂದು ಶ್ರಮದಾನ ಮಾಡುವ ಮೂಲಕ ಒಂದು ಪುಣ್ಯದ ಕಾರ್ಯವನ್ನು ಮಾಡಿದ್ದೀರಿ. ಈ ಸಂಸ್ಥೆಯ ಬೆಳವಣಿಗೆಗೆ ನಿಮ್ಮ ಪ್ರೀತಿ, ವಿಶ್ವಾಸ ಹೀಗೆಯೇ ಮುಂದುವರಿಯಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಮಟ್ಟದ ಶಿಕ್ಷಕರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್ ಅವರು ಮಾತನಾಡಿ, ಹಳೆಯ ಸಂಘದ ವತಿಯಿಂದ ಕಾಲೇಜಿನ ನಿವೇಶನ ಪಡೆಯಲು ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ.ನಮ್ಮ ಕರೆಯನ್ನು ಬೆಂಬಲಿಸಿ ಈ ಕಾಲೇಜಿನ ಅಭಿವೃದ್ಧಿಗೆ ತಮ್ಮೆಲ್ಲರ ಬೆಂಬಲ, ಸಹಾಯ, ಸಹಕಾರ ಹೀಗೆ ಇರಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಟರಾಜ್ ಜಿ.ಎಲ್., ಅವರನ್ನು ಸಂಘದ ಎಲ್ಲ ಸದಸ್ಯರು ಹಾಗೂ ಪ್ರಾಂಶುಪಾಲರು ಅಭಿನಂದಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಸಂಘದ ಪದಾಧಿಕಾರಿಗಳಾದ ನಟರಾಜ್ ಜಿ.ಎಲ್., ಶ್ರೀನಿವಾಸಮೂರ್ತಿ ಟಿ, ಪವನ್ ಆರ್., ಯತೀಶ್ ಕುಮಾರ್, ರಂಗಸ್ವಾಮಿ ಆರ್, ರಹಮಮತ್ತುಲ್ಲಾ ಪಿ., ಬುದ್ದೇಶ, ಶಿಕ್ಷಕ ಉಮಾಪತಿ ಎನ್. ಧನಂಜಯ ಬಿ., ರಂಗಸ್ವಾಮಿ ಎಂ.ಟಿ., ದೇವರಾಜು ಬಿ.ಆರ್., ನಾರಾಯಣ ಕೆ.ಎನ್, ನರಸಿಂಹಪ್ಪ ಡಿ. ಮೊದಲಾದವರು ಪಾಲ್ಗೊಂಡಿದ್ದರು.
ಪದಾಧಿಕಾರಿಗಳು:
ತುಮಕೂರಿನ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ಶ್ರೀನಿವಾಸಮೂರ್ತಿ ಟಿ., ಅಧ್ಯಕ್ಷರಾಗಿ ನಟರಾಜು ಜಿ.ಎಲ್., ಉಪಾಧ್ಯಕ್ಷರಾಗಿ ಪವನ್ ಆರ್., ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ಕುಮಾರ್, ಸಂಚಾಲಕರಾಗಿ ರಂಗಸ್ವಾಮಿ ಆರ್. ಹಾಗೂ ರಹಮತ್ತುಲ್ಲಾ ಪಿ., ಬುದ್ದೇಶ್, ನಿರ್ದೇಶಕರಾಗಿ ಉಮಾಪತಿ ಎನ್., ಧನಂಜಯ ಬಿ., ರಂಗಸ್ವಾಮಿ ಎಂ.ಟಿ., ದೇವರಾಜು ಬಿ.ಆರ್., ನಾರಾಯಣ ಕೆ.ಎನ್., ನರಸಿಂಹಪ್ಪ ಡಿ. ಅವರನ್ನು ಆಯ್ಕೆ ಮಾಡಲಾಗಿದೆ.
ವಿಡಿಯೋ ನೋಡಿ:
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700