ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿ ಪ್ರಾಥಮಿಕ ಕೃಷಿ ಸಹಕಾರಿ ನಿಯಮಿತದಲ್ಲಿ ಕೋಟ್ಯಂತರ ರೂ.ಗಳ ದುರ್ಬಳಕೆಯಾಗಿದೆ ಎಂದು ಆಡಳಿತ ಮಂಡಳಿಯ ನಿರ್ದೇಶಕ ನಾಗರಾಜ್, ಪ್ರಕಾಶ್ ಯಾದವ್ ಉಪಾಧ್ಯಕ್ಷ ವಿನಯ್ ಅವರ ಆರೋಪವು ಸತ್ಯಕ್ಕೆ ದೂರವಾದದ್ದು ಎಂದು ನಿಯಮಿತದ ಅಧ್ಯಕ್ಷ ಅಮರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಸಭೆಯನ್ನು ಆಡಳಿತ ಮಂಡಳಿಯ ಆದೇಶದಂತೆ ಮತ್ತು ಸಹಕಾರ ಇಲಾಖೆಯ ಅನುಮತಿ ಕೋರಿ ಕಲ್ಕೆರೆಯಲ್ಲಿ ಮಹಾಸಭೆಯನ್ನು ಆಯೋಜಿಸಿದ್ದು, ನಿಯಮ ಉಲ್ಲಂಘನೆ ಮಾಡಿಲ್ಲ. ಕೋಟ್ಯಂತರ ಹಗರಣದ ಬಗ್ಗೆ ಮಾತನಾಡಿರುವ ನಿರ್ದೇಶಕರುಗಳು ದಾಖಲೆ ಸಮೇತ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಹಿಂದಿನ ಕಾರ್ಯದರ್ಶಿಗಳ ಅವಧಿಯಲ್ಲಿ ನಡೆದ ವಿಚಾರವಾಗಿ ತನಿಖೆ ನಡೆಯುತ್ತಿದೆ. ಸಿಇಓ ಒಬ್ಬ ಮಹಿಳೆಯಾಗಿದ್ದು,ನಿರಂತರ ದಬ್ಬಾಳಿಕೆ ಮತ್ತು ದೌರ್ಜನ್ಯ ಎಸಗುತ್ತಿದ್ದಾರೆ ಹಾಗೂ ಮುಂದಿನ ಸಭೆಯಲ್ಲಿ ಚರ್ಚಿಸಿ, ಇವರುಗಳ ಮೇಲೆ ಕ್ರಮ ಜರುಗಿಸಲು ಕಾನೂನು ಹೋರಾಟ ಮತ್ತು ಸಹಕಾರ ಇಲಾಖೆಗೆ ಪತ್ರ ಬರೆಯುತ್ತೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಅರುಣ್ ಕುಮಾರ್,ಲಕ್ಷ್ಮೀಬಾಯಿ, ಪುಟ್ಟನಾಯ್ಕ,ನೂರುಲ್ಲಾ ಸಾಬ್ ಚಂದ್ರಕುಮಾರ್ ಮತ್ತು ಮಾಜಿ ನಿರ್ದೇಶಕ ಚಂದ್ರಪ್ಪ,ಗ್ರಾಪಂ ಸದಸ್ಯ ವೀರೇಂದ್ರ ಸ್ವಾಮಿ ಹಾಗೂ ಗ್ರಾಮಸ್ಥರಾದ ರವಿಕುಮಾರ್ ಮತ್ತು ಕೃಷ್ಣಮೂರ್ತಿ ಸೇರಿದಂತೆ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy