ಹೆಚ್.ಡಿ.ಕೋಟೆ/ಸರಗೂರು: ನೊಂದವರಿಗೆ ಶ್ರಮದಾನದ ಹಣದಿಂದ ಸಹಾಯ ಹಸ್ತ ಚಾಚುವ ಸರ್ವ ಧರ್ಮ ಸಮಾಜ ಸೇವೆ ಟ್ರಸ್ಟ್ ಜಿಲ್ಲೆ ಹಾಗೂ ರಾಜ್ಯದಲ್ಲೂ ಕಾರ್ಯಾಚರಿಸಲಿ ಎಂದು ಜೆಡಿಎಸ್ ಯುವ ಮುಖಂಡ ಜಯಪ್ರಕಾಶ್ ಹಾರೈಸಿದರು.
ಪಟ್ಟಣದ ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಸರ್ವ ಧರ್ಮ ಸಮಾಜ ಸೇವಾ ಟ್ರಸ್ಟ್ ನ ಎರಡನೇ ವರ್ಷದ ವಾರ್ಷಿಕೋತ್ಸವ ಹಾಗೂ ಬಡವರಿಗೆ ನೆರವು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ನನ್ನ ಕುಟುಂಬಕ್ಕೆಷ್ಟೇ ಸೀಮಿತ ಎಂಬ ಕಾಲದಲ್ಲಿ ಸರ್ವಧರ್ಮಿಯರನ್ನೂ ಒಗ್ಗೂಡಿಸಿ ರಚಿಸಿರುವ ಈ ಟ್ರಸ್ಟ್ , ನೊಂದವರಿಗೆ ಧ್ವನಿಯಾಗಿದೆ. ರಾಜಕೀಯ ರಹಿತವಾಗಿ ಜಾತ್ಯತೀತವಾಗಿ ಕಾರ್ಯನಿರ್ವಹಿಸುವ ಮೂಲಕ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಬುದ್ಧ ಮಾತನಾಡಿ, ತಾಲ್ಲೂಕಿನಲ್ಲಿ ಎರಡು ವರ್ಷ ಕಾಲ ಸಮಾಜಮುಖಿಯಾಗಿರುವ ಟ್ರಸ್ಟ್ ಗೆ ಪಟ್ಟಣದಲ್ಲಿ ನಿವೇಶನ ಮಂಜೂರು ಮಾಡಿ ಕೊಡಬೇಕು ಎಂದು ಕೋರಿದರು.
ಟ್ರಸ್ಟ್ ಸಂಸ್ಥಾಪಕರಾದ ಕೃಷ್ಣರಾಜು ಹಳೆಹೆಗ್ಗುಡಿಲು ಅವರು ಟ್ರಸ್ಟ್ ನ ಕಾರ್ಯನಿರ್ವಹಣೆ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ 18 ಮಂದಿ ಅಸಹಾಯಕರಿಗೆ ತಲಾ 2 ಸಾವಿರ ರೂ. ನಗದು ನೆರವು ಹಾಗೂ 43 ಮಂದಿಗೆ ಆಹಾರ ಕಿಟ್ ವಿತರಿಸಲಾಯಿತು. ಇದೆ ಸಂದರ್ಭದಲ್ಲಿ ಹೆಳೆಹೆಗ್ಗುಡಿಲು ಗ್ರಾಮದ ಯೋಧರಾದ ರಾಜೇಶ್, ಶಿವಣ್ಣ ಜಯಪ್ರಕಾಶ್, ಮೊದಲಾದವರನ್ನು ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸರಾನಾಥ ಬುದ್ಧ ವಿಹಾರದ ಗೌತಮಿ ಬಂತೇಜಿ, ಭರತೇಶ್ ಜೋಯಿಷ್, ಮಹಮದ್ ಆಸಿಫ್, ಜೀವಿಕಾ ಬಸವರಾಜು, ಜೈಶೀಲಾ, ದೊರೆಸ್ವಾಮಿ, ಚಂದ್ರಕಲಾ, ಪೋಲಿಸ್ ಇಲಾಖೆ ಮದ್ವಾನಾಯಕ್, ಪುರಸಭಾ ಸದಸ್ಯರಾದ ಮಿಲ್ ನಾಗರಾಜ್, ಪ್ರೇಮ್ ಸಾಗರ್, ನಂಜಪ್ಪ, ಯಶವಂತ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ರಾಮಸ್ವಾಮಿ, ಸುರೇಶ್, ಶಿವಕುಮಾರ್, ಚೆನ್ನಪ್ಪ ಸರಗೂರು, ಪಾಪಣ್ಣಹಾದನೂರು ಕಾರ್ಯಕರ್ತರು ಸೇರಿದಂತೆ ಹಲವರು ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy