ಶಿವಮೊಗ್ಗ: ಹಿಂದೂ ಪದದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಯನ್ನು ಅವರ ಪಕ್ಷದ ಮುಖಂಡರು, ನಾಯಕರು ಖಂಡಿಸಿದ್ದಾರೆ. ಈತ ಅವರಿಗಿಂತ ದೊಡ್ಡವನಾ.. ಎಂದು ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಹಿಂದೂ ಹಿಂದುತ್ವದ ಬಗ್ಗೆ ಯಾರು ಅಪಮಾನ ಮಾಡುತ್ತಾರೋ ಅಂತವರಿಗೆ ದೇಶದಲ್ಲಿ ಸ್ಥಾನಮಾನ ಇಲ್ಲ. ವಾಲ್ಮೀಕಿ ರಕ್ತ ಹಂಚಿಕೊಂಡು ಹುಟ್ಟಿದ ಸತೀಶ್ ಜಾರಕಿಹೊಳಿಯಿಂದ ರಾಮಾಯಣ, ಮಹಾಭಾರತಕ್ಕೆ ಅಪಮಾನವಾಗಿದೆ. ಅವರ ಹೇಳಿಕೆಯನ್ನು ಅವರ ಪಕ್ಷದ ಮುಖಂಡರು, ನಾಯಕರು ಖಂಡಿಸಿದ್ದಾರೆ. ಈತ ಅವರಿಗಿಂತ ದೊಡ್ಡವನಾ.. ಎಂದು ಕಿಡಿಕಾರಿದ್ದಾರೆ.
ಪಕ್ಷದ ನಾಯಕರ ಒತ್ತಾಯಕ್ಕೆ ಮಣಿದು ಕ್ಷಮೆ ಕೇಳಿದೆ ಅಂತ ಹೇಳಿಕೆ ಕೊಟ್ಟಿದ್ದಾರೆ ಸತೀಶ್ ಜಾರಕಿಹೊಳಿ. ನಿಮ್ಮ ರಾಷ್ಟ್ರೀಯ ನಾಯಕರಿಗಿಂತ ನೀನು ದೊಡ್ಡ ಮನುಷ್ಯನಾ.. ಎಂದು ಪ್ರಶ್ನಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy