ಕೊರಟಗೆರೆ: ಹಿಂದೂ ಅನ್ನೋದು ಪರ್ಷಿಯನ್ ಪದ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಸಂಬಂಧ ನಟ ಅಹಿಂಸಾ ಚೇತನ್ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದಲ್ಲಿ ಪ್ರತಿಕ್ರಿಯಿಸಿದರು.
ಸಿದ್ದರಬೆಟ್ಟದಲ್ಲಿ ನಡೆಯುತ್ತೀರುವ ಅಡವಿ ಚಲನಚಿತ್ರ ಚಿತ್ರಕರಣ ಸ್ಥಳಕ್ಕೆ ಆಗಮಿಸಿದ್ದ ನಟ ಚೇತನ್ ಮಾಧ್ಯಮಗಳ ಜೊತೆಗೆ ಮಾತನಾಡಿ, ಸತೀಶ್ ಜಾರಕಿಹೊಳಿ ಹೇಳಿಕೆಯಲ್ಲಿ ಸತ್ಯ ಇದ್ರೇ ವಾಪಸ್ ಪಡಿಬಾದ್ರು, ಕ್ರಿ.ಪೂ 6 ನೇ ಶತಮಾನದಲ್ಲಿ ಸಿಂದೂ ನದಿಯ ಹಿಂದೆ ಇದ್ದವರಿಗೆ ಹಿಂದೂ ಎಂಬ ಪದ ಪರ್ಷಿಯನ್ ರಿಂದ ಬಂದಿದೆ. ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ ವಾಪಸ್ ಪಡೆಯೋದಕ್ಕಿಂತ ದಾಖಲೆ ಒದಗಿಸಿ ವಿಶ್ಲೇಷಣೆ ಮಾಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಪುರಾವೆ ಮತ್ತು ದಾಖಲೆ ಇಲ್ಲದೇ ಹೇಳಿಕೆ ನೀಡಬಾದ್ರು, ನೀಡಿದ ಮೇಲೆ ಅಧ್ಯಯನದ ವಿಶ್ಲೇಷನೆ ನೀಡ್ಬೇಕು. ಹಿಂದೂ, ಹಿಂದುತ್ವ, ಹಿಂದುಧರ್ಮ, ಹಿಂದೂಸ್ತಾನ, ಹಿಂದೂರಾಜ ಎಂಬ ಪದಗಳು ಬೇರೆ ಬೇರೆ ಚೌಕಟ್ಟಿನಲ್ಲಿ ಬೇರೆಯದೇ ಅರ್ಥ ಕೊಡುತ್ತದೆ. ರಾಜಕೀಯ ಉದ್ದೇಶದಿಂದ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ ಹಿಂದಕ್ಕೆ ಪಡೆದಿರೋದು ನನಗೇ ನಿರಾಸೆ ತಂದಿದೆ ಎಂದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz