ಬೆಳಗಾವಿ : ಫೆಬ್ರುವರಿ 2. 2023 ರಿಂದ ಫೆ.8 ರ ವೆರೆಗೆ ನಡೆಯಲಿರುವ ಯಲ್ಲಮ್ಮಾದೇವಿ ಜಾತ್ರೆ, ಫೆ.4 ರಿಂದ 8 ರ ವರೆಗೆ ನಡೆಯಲಿರುವ ಚನ್ನಬಸವೇಶ್ವರ ಉಳವಿ ಜಾತ್ರೆ ಹಾಗೂ ಫೆ.5 ರಿಂದ 8ರ ವರೆಗೆ ನಡೆಯಲಿರುವ ಭಾವೇಶ್ವರಿ ದೇವಿ ಮೋಹನಗಾ ದಡ್ಡಿ ಜಾತ್ರೆ ಅಂಗವಾಗಿ ಬೆಳಗಾವಿ ಕೇಂದ್ರ/ನಗರ ಮತ್ತು ಬೈಲಹೊಂಗಲ ಬಸ್ ನಿಲ್ದಾಣಗಳಿಂದ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಠಿಯಿಂದ ಸದರಿ ಜಾತ್ರಾ ಅವಧಿಯಲ್ಲಿ ಬೆಳಗಾವಿ ಕೇಂದ್ರ/ನಗರ ಬಸ್ ನಿಲ್ದಾಣ, ಬೈಲಹೊಂಗಲ ಬಸ್ ನಿಲ್ದಾಣ, ಯಲ್ಲಮ್ಮನ ಗುಡ್ಡ, ಉಳವಿ, ಹಾಗೂ ದಡ್ಡಿಯಲ್ಲಿ ಜಾತ್ರಾ ಬಿಂದು ಸ್ಥಾಪಿಸಿ ಕೆ.ಎಸ್.ಟಿ ಪೇದೆ ರವರನ್ನು ನಿಯೋಜಿಸಿ, ವಾಹನಗಳ ಸುಗಮ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕ ಪ್ರಯಾಣಿಕರು ತಂಡಗಳ ರೂಪದಲ್ಲಿ ಪ್ರಯಾಣಿಸಲು ಇಚ್ಚಿಸಿದಲ್ಲಿ, ಸಾಂಧರ್ಬಿಕ ಒಪ್ಪಂದದ ಮೇಲೆ ವಾಹನಗಳನ್ನು ಒದಗಿಸಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೋಬೈಲ್ ಸಂ -7760991625 (ಘ.ವ್ಯ ಬೆಳಗಾವಿ-1) & 7760991627(ಘ.ವ್ಯ ಬೆಳಗಾವಿ-3) ರವರನ್ನು ಸಂಪರ್ಕಿಸಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇವರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


