ಹೋಟೆಲ್ ಬಗ್ಗೆ ಆನ್ ಲೈನ್ ನಲ್ಲಿ ಒಳ್ಳೆಯ ಅನಿಸಿಕೆ(ರಿವ್ಯೂ) ಬರೆದರೆ ಹಣ ನೀಡುವುದಾಗಿ ಹೇಳಿ ವಂಚಿಸಲಾಗಿದ್ದು, ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
‘ಸ್ಥಳೀಯ ನಿವಾಸಿಯೊಬ್ಬರು ವಂಚನೆ ಸಂಬಂಧ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ದೂರುದಾರರಿಗೆ ಆನ್ ಲೈನ್ ಮೂಲಕ ಆರೋಪಿ ಪರಿಚಯವಾಗಿತ್ತು. ‘ಹೋಟೆಲ್ ಬಗ್ಗೆ ಆನ್ ಲೈನ್‌ನಲ್ಲಿ ಒಳ್ಳೆಯ ರೀತಿಯಲ್ಲಿ ಅನಿಸಿಕೆ ಬರೆದರೆ ಹಣ ನೀಡಲಾಗುವುದು’ ಎಂದಿದ್ದ.


