ಪಾವಗಡ: ಪಾವಗಡ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯ ಎಸ್ ಬಿ ಕಾನ್ ಸ್ಟೇಬಲ್ ಮಟ್ಕಾ ಮತ್ತು ಇಸ್ಪೀಟ್ ದಂಧೆಕೋರರ ಜೊತೆ ಶಾಮೀಲಾಗಿ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಜಿಲ್ಲಾ ಅಟ್ರಾಸಿಟಿ ಸಮಿತಿಯ ಸದಸ್ಯ ಡಿಜೆಎಸ್ ನಾರಾಯಣಪ್ಪ ಆರೋಪಿಸಿದ್ದಾರೆ
ಭಾನುವಾರದಂದು ಪಾವಗಡ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಎಸ್ಸಿ ಎಸ್ಟಿ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿ, ಅರಸೀಕೆರೆ ತಾಣ ವ್ಯಾಪ್ತಿಯಲ್ಲಿ ಸರಿಯಾಗಿ ಎಸ್ಸಿ ಎಸ್ಟಿ ಕುಂದುಕೊರತೆ ಸಭೆ ನಡೆಸುವುದಿಲ್ಲ, ಬರೀ ನಾಲ್ಕು ಜನ ದಂಧೆಕೋರರನ್ನ ಸೇರಿಸಿ ಸಭೆ ನಡೆಸುತ್ತಾರೆ. ಅಲ್ಲಿನ ಜನರಿಗೆ ಇದರ ಬಗ್ಗೆ ಜಾಗೃತಿ ಇಲ್ಲ ದಲಿತರು ಠಾಣೆಗೆ ಹೋಗಿ ದೂರು ನೀಡಲು ಹೋದರೆ ದೂರು ಸ್ವೀಕರಿಸದೆ ಅಲೆದಾಡಿಸುತ್ತಾರೆ ಮತ್ತು ಡೀಲ್ ಮಾಡಿಕೊಳ್ಳುತ್ತಾರೆ ಎಂದು ನೇರವಾಗಿ ಎಸ್ ಬಿ ಕಾನ್ ಸ್ಟೇಬಲ್ ಚೌಕ ತಾಲಿ ವಿರುದ್ಧ ಮಧುಗಿರಿ ಡಿವೈಎಸ್ಪಿ ಮಂಜುನಾಥ್ ಅವರಿಗೆ ದೂರು ಹೇಳಿದರು.
ಅದೇ ರೀತಿ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯ ಪೇದೆ ಸದ್ದಂ ಅವರು ಕೂಡ ಮರಳು ದಂಧೆ ಗೌರವ ಜೊತೆ ಶಾಮೀಲಾಗಿ ಮರಳು ದಂಧೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದವರ ಮಾಹಿತಿಯನ್ನ ಮರಳು ದಂಧೆಕೋರರಿಗೆ ನೀಡುವಂತಹ ಕೆಲಸಕ್ಕೆ ಮುಂದಾಗಿದ್ದಾರೆ. ಸಮರ್ಪಕವಾಗಿ ತಮ್ಮ ಕರ್ತವ್ಯವನ್ನ ನಿರ್ವಹಿಸುತ್ತಿಲ್ಲ ಎಂದು ಸಭೆಯಲ್ಲಿ ದಲಿತ ಮುಖಂಡರು ಆಕ್ರೋಶದಿಂದ ಹೇಳಿದರು.
ಪಾವಗಡ ಪಟ್ಟಣದಲ್ಲಿ ಪುಂಡಪೋಕರಿಗಳು ಗಾಂಜಾ ಎಣ್ಣೆ ಸೇರಿದಂತೆ ಮತ್ತಿತರ ಮಾದಕ ವ್ಯಸನಕ್ಕೆ ತುತ್ತಾಗುತ್ತಿದ್ದು, ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ, ಕಾಲೇಜು ಮಕ್ಕಳಿಗೆ ತುಂಬಾ ಸಮಸ್ಯೆ ಉಂಟಾಗುತ್ತಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರಾದ ಬಂಗಾರಪ್ಪ ಆರೋಪಿಸಿದರು.
ಸಭೆಯಲ್ಲಿ ಡಿವೈಎಸ್ಪಿ ಮಂಜುನಾಥ್ ಮಾತನಾಡುತ್ತಾ, ಇತ್ತೀಚಿಗೆ ನಡೆಯುತ್ತಿರುವ ಕಳ್ಳತನಗಳನ್ನು ನಿಯಂತ್ರಣಕ್ಕೆ ತರುವ ಕಾರ್ಯದಲ್ಲಿ ಪಟ್ಟಣಕ್ಕೆ ಬಂದು ಹೋಗುವಂತಹ ಗಾಡಿಗಳನ್ನು ಪರಿಶೀಲಿಸಲು ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದೇವೆ, ಮುಂದಿನ ತಿಂಗಳು ಅರಸೀಕೆರೆಯಲ್ಲಿ ಎಸ್ಸಿ ಎಸ್ಟಿ ಕೊಂದು ಕೊರತೆ ಸಭೆಯನ್ನು ನಡೆಸುವ ವೇಳೆ ಸ್ವತಃ ನಾನೇ ಬಂದು ಸಮಸ್ಯೆಯನ್ನು ಬಗೆಹರಿಸುತ್ತೇನೆ ಯಾವುದೇ ಸಮಸ್ಯೆಗಳು ಇದ್ದರೆ ಕೂಡಲೇ ಪೊಲೀಸರನ ಸಂಪರ್ಕಿಸಿ ತಮಗೆ ನ್ಯಾಯ ಒದಗಿಸಿಕೊಡುತ್ತಾರೆ ಎಂಬ ಭರವಸೆಯನ್ನು ನೀಡಿದರು.
ಈ ವೇಳೆ ಸಿಪಿಐ ಸುರೇಶ್, ಪಿಎಸ್ ಐಗಳಾದ ಗುರುನಾಥ್, ವಿಜಯ್ ಕುಮಾರ್, ದಲಿತ ಮುಖಂಡರು ಹಾಗೂ ಪೊಲೀಸರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4