ದೇವದುರ್ಗ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಭಾಗ ಇದಕ್ಕೆ ನಿರ್ದರ್ಶನ ಎಂಬಂತೆ ದೇವದುರ್ಗ ತಾಲೂಕಿನ ಹೇರೂರ ಎಂಬ ಗ್ರಾಮದಲ್ಲಿ ಇಂದಿಗೂ ಸಹ ಶಾಲಾ ಕೊಠಡಿ ಇಲ್ಲದೆ ಬಡ ವಿದ್ಯಾರ್ಥಿಗಳು ಶಾಲೆಯಿಂದ ಹೊರಗಡೆ ಕುಳಿತುಕೊಂಡು ಓದುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲಾ ಕಟ್ಟಡಗಳು ಈಗೋ, ಆಗೋ ಬೀಳಬಹುದು ಎಂಬ ಸ್ಥಿತಿಯಲ್ಲಿದ್ದು, ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪ್ರಾಣ ಅಂಗೈಯಲ್ಲಿ ಹಿಡಿದು ವಿದ್ಯಾಭ್ಯಾಸ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮಳೆ ಬಂದರೆ ವಿದ್ಯಾರ್ಥಿಗಳ, ಶಿಕ್ಷಕರ ಪಾಡು ಹೇಳತೀರದು.
ಇಷ್ಟೆಲ್ಲಾ ದುರುಸ್ಥಿತಿ ಇದ್ದರೂ ಸಹ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಈ ನಿರ್ಲಕ್ಷ್ಯದ ಧೋರಣೆ ಸರಿಯಲ್ಲ. ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಂದು ಎರಡು ತಿಂಗಳುಗಳು ಕಳೆದರೂ ಈವರೆಗೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದು ರೂಪ ಶ್ರೀನಿವಾಸ್ ನಾಯಕ್ ಪ್ರಶ್ನಿಸಿದರಲ್ಲದೇ, ಶಾಲಾ ಕಟ್ಟಡ ನಿರ್ಮಾಣ ಆಗಬೇಕು ಎಂದು ಒತ್ತಾಯಿಸಿದರು.
10ರಿಂದ 15 ದಿನಗಳೊಳಗೆ ತಾತ್ಕಾಲಿಕ ಕ್ಲಾಸ್ ರೂಮ್ ಗಳನ್ನು ಮಾಡಬೇಕು ಬೇಕು ಎಂದು ರೂಪಾ ಶ್ರೀನಿವಾಸ್ ನಾಯಕ್ ಪಿಡಿಓ ಅವರಿಗೆ ಕರೆ ಮಾಡಿ ಒತ್ತಾಯಿಸಿದ್ದು, ಕ್ರಮಕ್ಕೆ ಮುಂದಾಗದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ.


