ಏ.1 ರಿಂದ ಅನ್ವಯವಾಗುವಂತೆ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ದರ ಏರಿಕೆಯಾಗುತ್ತಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ.
ಹೆದ್ದಾರಿ ಲೋಕಾರ್ಪಣೆಗೊಂಡ ಒಂದು ವರ್ಷದ ಅವಧಿಯಲ್ಲಿ ಎರಡನೇ ಬಾರಿ ಟೋಲ್ ದರ ಹೆಚ್ಚಳವಾಗಿದ್ದು, ಮೂರನೇ ದರ ನಿಗದಿಯಾಗಿದೆ. 2023ರ ಮಾರ್ಚ್ ನಲ್ಲಿ ಟೋಲ್ ಸಂಗ್ರಹ ಆರಂಭವಾಗಿತ್ತು. ನಂತರ ಜೂನ್ ನಲ್ಲಿ ಶೇ.22 ರಷ್ಟು ಟೋಲ್ ದರ ಏರಿಕೆಯಾಗಿತ್ತು. ಈಗ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008-ನಿಯಮ 5ರ ಪ್ರಕಾರ ಬಳಕೆದಾರರ ಶುಲ್ಕ ದರದ ವಾರ್ಷಿಕ ಪರಿಷ್ಕರಣೆಯಂತೆ ಮತ್ತೆ ಟೋಲ್ ದರ ಹೆಚ್ಚಳ ಮಾಡಲಾಗಿದೆ.
ಶುಲ್ಕ ಹೆಚ್ಚಳದ ಬಗ್ಗೆ ಟೋಲ್ ಸಿಬ್ಬಂದಿ ವಾಹನ ಸವಾರರಿಗೆ ಕರಪತ್ರ ಹಂಚುತ್ತಿದ್ದಾರೆ. ದರಪಟ್ಟಿ ಫಲಕ ತಿದ್ದುಪಡಿ ಮಾಡಲಾಗುತ್ತಿದೆ. ಹೂತನ ಪರಿಷ್ಕರಣೆಯಲ್ಲಿ ಶೇ.3 ತಷ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ.
ಏಕಮುಖ ಸಂಚಾರ ಕಾರು/ವ್ಯಾನ್ / ಜೀಪ್ ಗಳಿಗೆ ಶುಲ್ಕ 155 ರೂ.ನಿಂದ 160ಕ್ಕೆ, ಲಘು ವಾಣಿಜ್ಯ ಬಳಕೆ ವಾಹನಗಳಿಗೆ 250ರಿಂದ 260ಕ್ಕೆ, ಟ್ರಕ್ / ಬಸ್/ಎರಡು ಆಕ್ಸೆಲ್ ವಾಹನಗಳಿಗೆ ಶುಲ್ಕ 525ರಿಂದ 540 ರೂ.ಗೆ ಏರಿಕೆಯಾಗಿದೆ. ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳಿಗೆ 575ರಿಂದ ರೂ.590 ರೂ. ಗೆ, ಭಾರೀ ಕಟ್ಟಡ ನಿರ್ಮಾಣ ವಾಹಗನಳು/ಅರ್ಥ್ ಮೂವರ್ಸ್/4-6 ಆಕ್ಸೆಲ್ ವಾಹನಗಳಿಗೆ 825 ರಿಂದ 840 ರೂ.ಗೆ ಹೆಚ್ಚಳವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


