ಗುಜರಾತ್ ನಾಡಿಯಾಡ್ ಬಳಿ ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಗಾಗಿ 100 ಮೀಟರ್ ಉದ್ದದ ಎರಡನೇ ಉಕ್ಕಿನ ಸೇತುವೆಯನ್ನು ಪ್ರಾರಂಭಿಸಲಾಗಿದೆ. ಭುಜ್ ಜಿಲ್ಲೆಯಲ್ಲಿರುವ ಕಾರ್ಯಾಗಾರದಲ್ಲಿ 1486 ಮೆಟ್ರಿಕ್ ಟನ್ ಉಕ್ಕಿನ ಸೇತುವೆಯನ್ನು ನಿರ್ಮಿಸಲಾಗಿದೆ.
ಈ ಸೇತುವೆಯನ್ನು ನೆಲದಿಂದ 15.5 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದೆ. ಭಾರತೀಯ ರೈಲ್ವೆ ಮಾರ್ಗದ ವಿದ್ಯುತ್ ಬ್ಲಾಕ್ ಮತ್ತು ಸಂಚಾರ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಈ ಸೇತುವೆಯನ್ನು ನಿರ್ಮಿಸಲಾಗಿದೆ.
ರೈಲ್ವೆ ಮಾರ್ಗಗಳು, ಎಕ್ಸ್ ಪ್ರೆಸ್ ವೇಗಳು ಮತ್ತು ಹೆದ್ದಾರಿಗಳನ್ನು ದಾಟಲು ಉಕ್ಕಿನ ಸೇತುವೆಗಳು ಸೂಕ್ತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಟೆಗೆ 100-160 ಕಿ.ಮೀ ವೇಗದಲ್ಲಿ ಚಲಿಸಬಲ್ಲ ರೈಲುಗಳಿಗೆ ಉಕ್ಕಿನ ಸೇತುವೆಗಳನ್ನು ನಿರ್ಮಿಸುವ ಪರಿಣತಿಯನ್ನು ಭಾರತ ಹೊಂದಿದೆ. ಈಗ ಅದೇ ಪರಿಣತಿಯನ್ನು 320 ಕಿ.ಮೀ ವೇಗದ ಎಂಎಎಚ್‌ಎಸ್‌ಆರ್ಸಿ ಗೆ ಅನ್ವಯಿಸಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296