ಸಂಶೋಧನೆಯ ಪ್ರಕಾರ ದಿನಕ್ಕೆ 30 ನಿಮಿಷಗಳ ಕಾಲ ಸೈಕ್ಲಿಂಗ್ ಮಾಡುವುದರಿಂದ ಹೃದಯ ಮತ್ತು ಮನಸ್ಸು ಬಲಗೊಳ್ಳುತ್ತದೆ. ಮೆದುಳಿನ ಹೊಸ ಕೋಶಗಳ ಅಭಿವೃದ್ಧಿಗೆ ಸಹಕಾರಿ.
ಪ್ರತಿದಿನ ಬೆಳಗ್ಗೆ ಕನಿಷ್ಟ 30 ನಿಮಿಷಗಳ ಕಾಲ ಸೈಕ್ಲಿಂಗ್ ಮಾಡಿದರೆ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಹಾಗೆಯೇ ಹೃದಯದ ಬಡಿತ ಹೆಚ್ಚಿಸುತ್ತದೆ.
ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ. ನಿರಂತರ ಸೈಕ್ಲಿಂಗ್ ನಿಂದ ಖಿನ್ನತೆ ಮತ್ತು ಆತಂಕ ಕಡಿಮೆಯಾಗುತ್ತದೆ. ಒಟ್ಟಾರೆ ದೇಹದ ತೂಕ ಇಳಿಸಿ ಫಿಟ್ ಆಗಿರಲು ಸಹಕಾರಿಯಾಗಿದೆ.