ಬೆಂಗಳೂರು : ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರುಗಳ ಮುಂದೆ ಸೂಚಿಸಲಾದ ಹುದ್ದೆ ಮತ್ತು ಸ್ಥಳಗಳಿಗೆ ವರ್ಗಾಯಿಸಿ/ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.
1.) ಶಾಮಸುಂದರ ಎಸ್ ಅಡಿಗ. ಹಿರಿಯ ಉಪನ್ಯಾಸಕರು, ಡಯಟ್, ಹಾವೇರಿ,ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು, ರಾಣೇಬೆನ್ನೂರು, ಹಾವೇರಿ ಜಿಲ್ಲೆ (ಶ್ರೀ ಎಂ.ಹೆಚ್. ಪಾಟೀಲ್ ಇವರ ಜಾಗಕ್ಕೆ).
2.) ರಾಜೇಗೌಡ, ಹಿರಿಯ ಸಹಾಯಕ ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬೇಲೂರು ತಾಲ್ಲೂಕು, ಹಾಸನ ಜಿಲ್ಲೆ (ಶ್ರೀ ಕೆ.ಪಿ ನಾರಾಯಣ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ).
3.) ರಮೇಶ್ ಕೆ.ಸಿ.ಕಾರ್ಯಕ್ರಮ ಅಧಿಕಾರಿ, ರಾಜ್ಯ ಯೋಜನಾ ನಿರ್ದೇಶಕರ ಕಛೇರಿ, ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ (ಶ್ರೀ ತಿಮ್ಮಯ್ಯ ಇವರ ಜಾಗಕ್ಕೆ).
4.) ತಿಮ್ಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಇವರನ್ನು ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕೋಲಾರ (ಖಾಲಿ ಹುದ್ದೆಗೆ).
5.) ಎನ್.ವೆಂಕಟೇಶ್, ಕಾರ್ಯಕ್ರಮಾಧಿಕಾರಿಗಳು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು. ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆನೇಕಲ್, ಬೆಂಗಳೂರು ದಕ್ಷಿಣ ಜಿಲ್ಲೆ.
6.)ಶ್ರೀಮತಿ ಜಯಲಕ್ಷ್ಮಿ ಕ್ಷೇತ್ರ ಶಿಕ್ಷಣಾಧಿಕಾರಿಗಳು. ಅನೇಕಲ್, ಬೆಂಗಳೂರು ದಕ್ಷಿಣ ಜಿಲ್ಲೆ. ಇವರನ್ನು ಹಿರಿಯ ಉಪನ್ಯಾಸಕರು,ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ರಾಮನಗರ (ಖಾಲಿ ಹುದ್ದೆಗೆ).
7.) ಮಂಜುನಾಥ ಎಸ್ ಆರ್ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರ ಕಛೇರಿ, ಚಿಕ್ಕಮಗಳೂರು.ಇವರನ್ನು ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರ ಕಛೇರಿ, ಶಿವಮೊಗ್ಗ (ಶ್ರೀಮತಿ ಬಿಂಬ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ).
8.) ದುರ್ಗಪ್ಪ ಡಿ, ಶಿಕ್ಷಣಾಧಿಕಾರಿಗಳು, ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ್. ಅಕ್ಷರ ದಾಸೋಹ ಕಾರ್ಯಕ್ರಮ, ಜಿಲ್ಲಾ ಪಂಚಾಯತ್, ದಾವಣಗೆರೆ. ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹರಿಹರ ತಾಲ್ಲೂಕು, ದಾವಣಗೆರೆ ಜಿಲ್ಲೆ (ಶ್ರೀ ಎಂ.ಹನುಮಂತಪ್ಪ ಇವರ ಜಾಗಕ್ಕೆ)
9.)ಎಂ. ಹನುಮಂತಪ್ಪ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹರಿಹರ ತಾಲ್ಲೂಕು, ದಾವಣಗೆರೆ ಜಿಲ್ಲೆ. ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು, ತುಮಕೂರು ವಲಯ, ತುಮಕೂರು ಜಿಲ್ಲೆ (ಶ್ರೀಮತಿ ಸೂರ್ಯಕಲಾ ಇವರ ಜಾಗಕ್ಕೆ)
10.) ಸೂರ್ಯಕಲಾ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತುಮಕೂರು ವಲಯ, ತುಮಕೂರು ಜಿಲ್ಲೆ.ಇವರನ್ನು ಕಾರ್ಯಕ್ರಮಾಧಿಕಾರಿಗಳು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು (ಖಾಲಿ ಹುದ್ದೆಗೆ)
11.) ಗುರುಲಿಂಗಯ್ಯ ಎನ್. ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹ, ಜಿಲ್ಲಾ ಪಂಜಾಯತ್, ಚಾಮರಾಜನಗರ, ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು. ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ (ಖಾಲಿ ಹುದ್ದೆಗೆ).
12.) ಎನ್.ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಚಿಕ್ಕಬಳ್ಳಾಪುರ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.(ಶ್ರೀ ಮತಿ ತನುಜಾ ಇವರ ಜಾಗಕ್ಕೆ).
13.) ತನುಜಾ.ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.ಇವರನ್ನು ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಚಿಕ್ಕಬಳ್ಳಾಪುರ ಜಿಲ್ಲೆ.
14.) ಅಶ್ವಥ್ ನಾರಾಯಣ್ ಕೆ.ಎನ್. (ಸ್ಥಳ ನಿರೀಕ್ಷಣೆಯಲ್ಲಿರುವವರು) ಇವರನ್ನು ಹಿರಿಯ ಸಹಾಯಕ ನಿರ್ದೇಶಕರು, ಪಠ್ಯಪುಸ್ತಕ ಸಂಘ, ಮಲ್ಲೇಶ್ವರಂ, ಬೆಂಗಳೂರು (ಖಾಲಿ ಹುದ್ದೆಗೆ)
15.) ಹೆಚ್.ಬಿ ಮೋಹನ್ ಕುಮಾರ್. ಶಿಕ್ಷಣಾಧಿಕಾರಿ, ಉಪನಿರ್ದೇಶಕರ ಕಛೇರಿ, ಹಾಸನ ಜಿಲ್ಲೆ.ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ.
16.) ಮೋಹನ್ ಕುಮಾರ್ ಬಿ.ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅರಸೀಕೆರೆ ತಾಲೂಕು.ಹಾಸನ ಜಿಲ್ಲೆ ಇವರನ್ನು. ಕಾರ್ಯಕ್ರಮಾಧಿಕಾರಿ, ಸಮಗ್ರ ಶಿಕ್ಷಣ ಕರ್ನಾಟಕ, ರಾಜ್ಯ ಯೋಜನಾ ನಿರ್ದೇಶಕರ ಕಛೇರಿ, ಬೆಂಗಳೂರು (ಖಾಲಿ ಹುದ್ದೆಗೆ).
17.) ಡಾ. ತುಳಸಿರಾಮ ರಾಮಣ್ಣ ದೊಡ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಔರಾದ್, ಬೀದರ್ ಜಿಲ್ಲೆ. ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬೀದರ್ ತಾಲ್ಲೂಕು, ಬೀದರ್ ಜಿಲ್ಲೆ (ಶ್ರೀಮತಿ ಅಖಿಲಾಂಡೇಶ್ವರಿ ಇವರ ಜಾಗಕ್ಕೆ).
18.) ಶಂಕರೇಗೌಡ, ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹ ಕಾರ್ಯಕ್ರಮ, ರಾಮನಗರ. ಇವರನ್ನು ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮೈಸೂರು (ಶ್ರೀ ಡಿ.ಆರ್ ಅಮಿತ್ ದಿನಾಂಕ ; 31/08/2024 ರಂದು ಮುಂಬಡ್ತಿಯಿಂದ ತೆರವಾಗುವ ಹುದ್ದೆಗೆ)
ಸ್ಥಳ ನಿಯುಕ್ತಿಗೊಳಿಸದ ಅಧಿಕಾರಿಗಳು ಸರ್ಕಾರದಲ್ಲಿ ಕಾರ್ಯವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಮತ್ತು ವರ್ಗಾವಣೆಗೊಂಡ ಅಧಿಕಾರಿಗಳು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಂಡು ವರ್ಗಾಯಿಸಿದ ಸ್ಥಳಕ್ಕೆ ಹಾಜರಾದ ಬಗ್ಗೆ ಸರ್ಕಾರವನ್ನೊಳಗೊಂಡಂತೆ ಸಂಬಂಧಿಸಿದವರೆಲ್ಲರಿಗೂ ಪ್ರಭಾರ ವರ್ಗಾವಣೆ ಪ್ರಪತ್ರವನ್ನು ಸಲ್ಲಿಸುವಂತೆ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


