ಅವಧಿ ಮೀರಿದ ಔಷಧ ಹಾಗೂ ಸೌಂದರ್ಯ ವರ್ಧಕ ಮಾರಾಟ ಮಾಡುತ್ತಿದ್ದ ಆರೋಪದಡಿ ರಾಜಾಜಿನಗರದ ಮೆಡಿಗೇಟ್ಸ್ ಫಾರ್ಮಸಿ ಕಂಪನಿ ಕಚೇರಿ ಮೇಲೆ ಸಿಸಿಬಿ ದಾಳಿ ಮಾಡಿದ್ದು, ಕಂಪನಿ ನಡೆಸುತ್ತಿದ್ದ ಅಪ್ಪ-ಮಗನನ್ನು ಬಂಧಿಸಿದ್ದಾರೆ.
ಹೊರರಾಜ್ಯಗಳಿಂದ ಔಷಧ ಹಾಗೂ ಸೌಂದರ್ಯ ವರ್ಧಕ ತರಿಸಿಕೊಂಡು ಮಾರುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು.
ದಾಳಿ ಮಾಡಿ, 1 1. 50 ಕೋಟಿ ಮೌಲ್ಯದ ಔಷಧ ಹಾಗೂ ಸೌಂದರ್ಯ ವರ್ಧಕ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದರು.


