ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಷನ್ ಸ್ಮಾರ್ಟ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಸ್ಪೀಡ್ ಪೋಸ್ಟ್ನಲ್ಲಿ ಕಳುಹಿಸಬೇಕು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ. ಎಂ. ಯೋಗೇಶ್ ಆದೇಶ ಹೊರಡಿಸಿದ್ದಾರೆ.
ಸ್ಪೀಡ್ ಪೋಸ್ಟ್ ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೀಗ ಆಯುಕ್ತರ ಆದೇಶ ಪಾಲಿಸುವುದು ಅನಿವಾರ್ಯವಾಗಿದೆ. ಪೋಸ್ಟ್ ನಲ್ಲಿ ಕಾರ್ಡ್ ಗಳು ವಿಳಂಬವಾಗಿ ತಲುಪುವುದರಿಂದ ಸಮಸ್ಯೆಗಳಾಗುತ್ತವೆ ಎಂದು ಜನರು ಮನವಿ ಸಲ್ಲಿಸಿದ್ದರು.


