nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪ.ಜಾತಿ, ಪಂಗಡ ಅಧಿಕಾರಿಗಳು ಮತ್ತು ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ

    July 19, 2025

    ತಾ.ಪಂ., ಜಿ.ಪಂ. ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸರಗೂರು ಕೃಷ್ಣ ಆರೋಪ

    July 19, 2025

    ಶಾಸಕ ಪ್ರಭು ಚವ್ಹಾಣ್ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ಯುವತಿ ದೂರು ಸಲ್ಲಿಕೆ

    July 19, 2025
    Facebook Twitter Instagram
    ಟ್ರೆಂಡಿಂಗ್
    • ಪ.ಜಾತಿ, ಪಂಗಡ ಅಧಿಕಾರಿಗಳು ಮತ್ತು ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ
    • ತಾ.ಪಂ., ಜಿ.ಪಂ. ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸರಗೂರು ಕೃಷ್ಣ ಆರೋಪ
    • ಶಾಸಕ ಪ್ರಭು ಚವ್ಹಾಣ್ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ಯುವತಿ ದೂರು ಸಲ್ಲಿಕೆ
    • ಖಾಸಗಿ ಬಸ್ ಪಲ್ಟಿ: 25ಕ್ಕೂ ಅಧಿಕ ಜನರಿಗೆ ಗಾಯ
    • ಸಾಲ ಮರುಪಾವತಿ ಮಾಡದ ವ್ಯಕ್ತಿಯನ್ನು ಸರಪಳಿಯಲ್ಲಿ ಕಟ್ಟಿಹಾಕಿ ಟಾರ್ಚರ್!
    • ಕುಟುಂಬ ಗಲಾಟೆ ನಿಲ್ಲಿಸಲು ಬಂದ ಪೇದೆಯಿಂದ ಮಹಿಳೆ ಮೇಲೆ ಅತ್ಯಾಚಾರ!
    • ಗಾಂಜಾ ಬೆರೆಸಿ ಚಾಕೊಲೇಟ್ ಮಾರಾಟ: ಆರೋಪಿಯ ಬಂಧನ
    • ಜುಲೈ 30ಕ್ಕೆ ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧಾರ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರ್ವರ್ ಸಮಸ್ಯೆ, ಪಡಿತರ ರೇಷನ್ ಗಾಗಿ ರಾತ್ರಿಯಿಡೀ ಕಾದು ಕುಳಿತ ಸಾರ್ವಜನಿಕರು
    ಕೊರಟಗೆರೆ October 23, 2024

    ಸರ್ವರ್ ಸಮಸ್ಯೆ, ಪಡಿತರ ರೇಷನ್ ಗಾಗಿ ರಾತ್ರಿಯಿಡೀ ಕಾದು ಕುಳಿತ ಸಾರ್ವಜನಿಕರು

    By adminOctober 23, 2024No Comments3 Mins Read
    koratagere (1)

    ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ

    ಕೊರಟಗೆರೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಅನ್ನಭಾಗ್ಯ ಈ ತಿಂಗಳು ವ್ಯತ್ಯಯವಾಗುವ ಸಾಧ್ಯತೆ ಕಂಡು ಬರುತ್ತಿತ್ತು, ಸರ್ವರ್ ಸಮಸ್ಯೆಯಿಂದ ಜನತೆ ಬೆಳಿಗ್ಗೆಯಿಂದ ರಾತ್ರಿವರೆಗೂ ನ್ಯಾಯಬೆಲೆ ಅಂಗಡಿಗಳ ಮುಂದೆ ರೇಷನ್ ಗಾಗಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವ್ಯವಸ್ಥೆಯ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದಾರೆ.


    Provided by
    Provided by

    ಕೊರಟಗೆರೆ ತಾಲೂಕಿನಲ್ಲಿ 85 ನ್ಯಾಯಬೆಲೆ ಅಂಗಡಿಗಳಿದ್ದು, ಪ್ರತಿ ತಿಂಗಳು 5 ನೇ ತಾರೀಖಿನಿಂದ ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರಿ ಗೋಡನ್ ಗಳಿಂದ ರೇಷನ್ ಸರಬರಾಜು ಆದರೆ, 30ನೇ ತಾರೀಕಿನ ಒಳಗೆ ವಿತರಣೆಯಾಗುತ್ತಿತ್ತು. ಆದರೆ ಈ ಬಾರಿ ಸರ್ವರ್ ಸಮಸ್ಯೆಯಿಂದ ಎರಡು ಮೂರು ದಿನಗಳಿಂದ ಬಿಪಿಎಲ್ ಕಾರ್ಡುದಾರರು ನ್ಯಾಯಬೆಲೆ ಅಂಗಡಿಯ ಮುಂಭಾಗ ಕುಳಿತು ಸರ್ವರ್ ಸಮಸ್ಯೆಯಿಂದ ಹಿಂತಿರುಗಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಅಂದರೆ ಬಡತನ ರೇಖೆಗಿಂತ ಕೆಳಗಿನವರಿಗೆ (ಬಿಪಿಎಲ್ ಕಾರ್ಡುದಾರರು) ಈ ಸಲ ಸಮಯಕ್ಕೆ ಪಡಿತರ ದೊರೆಯುವುದು ಸಂದೇಹ, 5 ಕೆ.ಜಿ. ನಂತರ ಮತ್ತೈದು ಕೆಜಿ ಗಳಿಗೆ ಇದುವರೆಗೆ ಅಕ್ಕಿ ಬದಲು ನೇರ ನಗದು ಯೋಜನೆ ಪ್ರಕಾರ, ಖಾತೆಗೆ ನೇರ ಹಣ ಜಮೆ ಮಾಡುತ್ತಿರುವಾಗಲೂ ಸಮಯಕ್ಕೆ ಅದನ್ನು ಜಮೆ ಮಾಡದೆ ಸಮಸ್ಯೆ ಮಾಡಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗ ಪಡಿತರ ವಿತರಣೆಯಲ್ಲೂ ಅಸಡ್ಡೆ ತೋರಿದಂತೆ ಕಾಣತೊಡಗಿದೆ ಎಂದು ಬಿಪಿಎಲ್ ಕಾರ್ಡುದಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಅನ್ನಭಾಗ್ಯದ ಫಲಾನುಭವಿಗಳಿಗೆ ಈ ಬಾರಿ ಪಡಿತರ ವಿತರಣೆ ತಡವಾಗಲಿದೆ. ಬಿಪಿಎಲ್ ಕಾರ್ಡುದಾರರಿಗೆ ಅನ್ನಭಾಗ್ಯ ಯೋಜನೆ ಪ್ರಕಾರ ಪ್ರತಿಯೊಬ್ಬರಿಗೆ ಹೆಚ್ಚುವರಿ 5 ಕಿಲೋ ಅಕ್ಕಿ ನೀಡುವ ಬದಲು ನಗದು ಹಣ ಒದಗಿಸುವ ಪ್ರಕ್ರಿಯೆ ಪ್ರತಿ ತಿಂಗಳು ವಿಳಂಬವಾಗುವುದು ಸರ್ವೆ ಸಾಮಾನ್ಯವಾಗಿದ್ದು, ಈ ತಿಂಗಳು ಎಲ್ಲ ಕಾರ್ಡುದಾರರಿಗೂ ನಿಗದಿತ ಪಡಿತರ ವಿತರಣೆಯೇ ವಿಳಂಬವಾಗುವ ಸಾಧ್ಯತೆ ಇದೆ, ಇದಕ್ಕೆ ಸರ್ವರ್ ಸಮಸ್ಯೆ ಕಾರಣವಾಗಿದ್ದು, ಇಲಾಖೆಯ ಕೆಲವೊಂದು ಸಮಸ್ಯೆಗಳಿಂದ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ, ಇವೆಲ್ಲಾ ಸಮಸ್ಯೆಗಳಿಂದ ಪಡಿತರ ಅಂಗಡಿಗಳಲ್ಲಿ ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆ ವರೆಗೆ ಪಡಿತರ ವಿತರಣೆ ಮಾಡಲು ಆಹಾರ ಇಲಾಖೆ ಪಡಿತರ ವಿತರಕರಿಗೆ ಸೂಚನೆ ನೀಡಿದೆ. ರಜಾ ದಿನಗಳಲ್ಲೂ ಪಡಿತರ ವಿತರಣೆ ಇರಲಿದೆ ಎಂದು ಅಧಿಕಾರಿಗಳು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

    ಸರ್ವರ್ ಸಮಸ್ಯೆ ನಿರ್ವಹಣೆಗೆ ಹೊಸ ವ್ಯವಸ್ಥೆಗೆ ಮುಂದಾದ ಇಲಾಖೆ:

    ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ತನ್ನ ಗಣಕಯಂತ್ರ ವ್ಯವಸ್ಥೆಯ ಸರ್ವರ್ ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಂಡಿರುವ ಕಾರಣ ಈ ತಿಂಗಳು ರಾಜ್ಯದಲ್ಲಿ ಪಡಿತರ ವಿತರಣೆ ವಿಳಂಬವಾಗಲಿದೆ ಈಗಾಗಲೇ ತಿಂಗಳ ಕೊನೆಗೆ ಬಂದಿದ್ದು, ಇನ್ನೂ ಶೇಕಡ 5 ಕಾರ್ಡುದಾರರಿಗೂ ಪಡಿತರ ವಿತರಣೆಯಾಗಿಲ್ಲ, ಅಕ್ಟೋಬರ್ 31ರೊಳಗೆ ಪಡಿತರವನ್ನು ಎಲ್ಲ ಕಾರ್ಡುದಾರರಿಗೆ ಹಂಚಿಕೆ ಮಾಡುವ ದೊಡ್ಡ ಸವಾಲಿನ ಕೆಲಸ ಬಾಕಿ ಇದೆ ಎಂದು ನ್ಯಾಯ ಬೆಲೆ ಅಂಗಡಿ ಮಾಲೀಕರು ಗೊಣಗಾಡುವುದು ಸರ್ವೇಸಾಮಾನ್ಯವಾಗಿದೆ.

    ರಾತ್ರಿ 10 ಗಂಟೆ ವರೆಗೆ ಕಾದ ರೇಷನ್ ಕಾರ್ಡ್ ಪಡಿತರದಾರರು

    ರೇಷನ್ ಸಮಸ್ಯ ನಡುವೆ ನ್ಯಾಯ ಬೆಲೆ ಅಂಗಡಿಗಳ ಮುಂಭಾಗ ರೇಷನ್ ಗಾಗಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ದಾರು ಬೆಳಗ್ಗೆಯಿಂದ ಊಟ ತಿಂಡಿ ಬಿಟ್ಟು ರಾತ್ರಿ ಹತ್ತು ಗಂಟೆವರೆಗೂ ತಮ್ಮ ರೇಷನ್ ಗಾಗಿ ನ್ಯಾಯಬೆಲೆ ಅಂಗಡಿಗಳ ಮುಂಭಾಗ ಕಾದು ಕುಳಿತ ರೇಷನ್ ದಾರರು ರಾತ್ರಿ 10 ಗಂಟೆಯಾದರೂ ಸರ್ವರ್ ಸಮಸ್ಯೆಯಿಂದ ಎಲ್ಲರಿಗೂ ವಿತರಣೆ ಯಾಗದಿದ್ರು, ನ್ಯಾಯಬೆಲೆ ಅಂಗಡಿ ಮುಂಭಾಗ ಬಿಟ್ಟು ಕದಲದೆ ಚಾಪೆ ಹಾಕಿಕೊಂಡು ಇಲ್ಲೇ ಮಲಗುತ್ತಿವೆ ಎನ್ನುವ ಪರಿಸ್ಥಿತಿಯಲ್ಲಿ ವಾತಾವರಣ ನಿರ್ಮಾಣವಾಗಿ ನ್ಯಾಯ ಬೆಲೆ ಅಂಗಡಿ ಮಾಲೀಕರುಗಳು ರೇಷನ್ ಕಾರ್ಡದಾರರನ್ನು ಒಲೈಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ.

    ಪಡಿತರ ವಿತರಣೆಯ ಪ್ರಕ್ರಿಯೆ ಹಾಗೂ ಸಮಸ್ಯೆ ಬಗ್ಗೆ ವಿವರಣೆ

    ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡುವಾಗ ಅವರು ಪ್ರತಿಕಾರ್ಡುದಾರರ ಹೆಬ್ಬೆಟ್ಟಿನ ಗುರುತು ಪಡೆದು ಅದು ದೃಢೀಕರಣವಾದ ಬಳಿಕ ಪಡಿತರ ವಿತರಣೆ ಮಾಡುವುದು ವಾಡಿಕೆ, ಇದು ಒಂದು ನಿಮಿಷದಲ್ಲಿ ಮುಗಿಯುವ ಪ್ರಕ್ರಿಯೆ, ಈಗ ಇದೇ ಪ್ರಕ್ರಿಯೆಗೆ 20–30 ನಿಮಿಷ ಬೇಕಾಗಿದೆ, ಸರ್ವರ್ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದೇ ಇದಕ್ಕೆ ಕಾರಣ. ಹೀಗಾಗಿ ಪಡಿತರ ಪಡೆಯಲು ಸರದಿ ನಿಲ್ಲುವ ಕಾರ್ಡುದಾರರ ಸಂಖ್ಯೆ ಹೆಚ್ಚಾಗಿದೆ, ಈ ದಿನಾಂಕದ ಸಮಯಕ್ಕೆ ಪ್ರತಿ ತಿಂಗಳು ಶೇಕಡ 60 ರಿಂದ 75 % ವಿತರಣೆಯಾಗುತ್ತಿದ್ದಿದ್ದು ಸಾಮಾನ್ಯವಾಗಿದ್ದು ಈಗ ಶೇಕಡ 5 ಪರ್ಸೆಂಟ್ ಸಹ ಮುಕ್ತಾಯವಾಗದಿರುವುದು ನ್ಯಾಯಬೆಲೆ ಅಂಗಡಿ ಅಲ್ಲದೆ ರೇಷನ್ ದಾರರಿಗೂ ದೊಡ್ಡ ಸಮಸ್ಯೆಯಾಗಿ ತಲೆ ನೋವಾಗಿ ಪರಿಣಮಿಸಿದೆ.

    ಇದು ಇಡೀ ರಾಜ್ಯದ ಸಮಸ್ಯೆ:

    ನ್ಯಾಯ ಬೆಲೆ ಅಂಗಡಿಗಳ ಸರ್ವರ್ ಸಮಸ್ಯೆ ಇಡೀ ರಾಜ್ಯದಲ್ಲಿ ತಲೆದೂರಿದ್ದು ಇಡೀ ರಾಜ್ಯದ ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಈ ತಿಂಗಳು ಬಿಪಿಎಲ್ ರೇಷನ್ ದಾರರ ಜೊತೆಗೆ ಮಾಲೀಕರು ಸಹ ಸಮಸ್ಯೆಯಿಂದ ಪರಿತಪಿಸುತ್ತಿದ್ದು, ಒಂದು ರೇಷನ್ ಕಾರ್ಡ್ ಹೆಬ್ಬೆಟ್ಟಿನ ಗುರುತು ಪಡೆಯಲು ಲ್ಯಾಪ್ಟಾಪ್ ಹಾಗೂ ಕಂಪ್ಯೂಟರ್ ಗಳ ಮುಂದೆ ಅರ್ಧ ಗಂಟೆಗಳ ಕಾಲ ಸರ್ವರ್ ಸಮಸ್ಯೆಯಿಂದ ಸುತ್ತುತ್ತಿರುವುದನ್ನೇ ನೋಡಲು ತಲೆ ನೋವಾಗಿ ಪ್ರಣಮಿಸಿದ್ದು ಈ ಸಮಸ್ಯೆಯಿಂದ ಯಾವಾಗ ಹೊರಬರುತ್ತೇವೆ ಎಂದು ಗೊಣಕಾಡುವಂತಾಗಿದೆ.

    ರಾಷ್ಟ್ರೀಯ ದತ್ತಾಂಶದಿಂದ ರಾಜ್ಯದತ್ತಾಂಶಕ್ಕೆ ಬದಲು:

    ಆಹಾರ ಇಲಾಖೆಯ ಸಿಸ್ಟಮ್ ಗಳ ನಿರ್ವಹಣಾ ವ್ಯವಸ್ಥೆಯನ್ನು ರಾಷ್ಟ್ರೀಯ ದತ್ತಾಂಶ ಕೇಂದ್ರ ನೋಡುತ್ತಿತ್ತು, ಅದನ್ನು ಈಗ ರಾಜ್ಯ ದತ್ತಾಂಶ ಕೇಂದ್ರಕ್ಕೆ ವರ್ಗಾವಣೆ ಮಾಡುತ್ತಿದ್ದು, ಇದಕ್ಕೆ ಸಮಯ ಹಿಡಿಯುತ್ತದೆ. ಹೀಗಾಗಿ ವಿಳಂಬವಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿ ತಿಳಿಸಲಾಗುತ್ತಿದ್ದು, ಈ ಸಮಸ್ಯೆ ಪೂರ್ಣ ನಿರ್ವಹಣೆಯಾಗುವವರೆಗೂ ನ್ಯಾಯ ಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ನರಳುವ ಬದಲು ಈ ಹಿಂದಿನ ಸರ್ವರ್ ಅಳವಡಿಸಿದರೆ ಬಹಳಷ್ಟು ಉಪಯೋಗವಾಗಲಿದೆ ಎನ್ನಲಾಗುತ್ತಿದೆ.


     

    admin
    • Website

    Related Posts

    ಕರ್ನಾಟಕ ರಾಜ್ಯ ಅಹಿಂದ ಜನಪರ ವೇದಿಕೆ ನೂತನ ತಾಲ್ಲೂಕು ಘಟಕ ಉದ್ಘಾಟನೆ

    July 13, 2025

    ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸಿ.ಡಿ.ಪ್ರಭಾಕರ್ ಅವಿರೋಧ ಆಯ್ಕೆ

    July 12, 2025

    ಅಕ್ಕಿರಾಂಪುರ ಗ್ರಾಮದ ಕಾರ್ಡಿನಲ್ ಶಾಲೆಯಲ್ಲಿ ಅಕ್ಷರಾಭ್ಯಾಸ ಮಾಡಿದ ಮಕ್ಕಳು

    July 11, 2025
    Our Picks

    ವೇಶ್ಯಾವಾಟಿಕೆ ಮಾಡಲು ಒಪ್ಪದ ಸಂಗಾತಿಯ ಬರ್ಬರ ಹತ್ಯೆ!

    July 17, 2025

    ಯೆಮೆನ್ ನಲ್ಲಿ ನರ್ಸ್ ನಿಮಿಷಾ ಪ್ರಿಯಾ ಮರಣ ದಂಡನೆ ಮುಂದೂಡಿಕೆ

    July 16, 2025

    ಕರ್ನಾಟಕದ ಬೆಳವಣಿಗೆಗೆ ಹೊಸ ರಸ್ತೆಗಳ ಅಭಿವೃದ್ಧಿ: ನಿತಿನ್ ಗಡ್ಕರಿ

    July 15, 2025

    ಅಪಘಾತದಲ್ಲಿ ಪತ್ನಿ ಮಗ ಸಾವಿನ ಖಿನ್ನತೆಯಲ್ಲಿರುವಾಗಲೇ  ಹಿರಿಯ ಮ್ಯಾರಥಾನ್‌ ಓಟಗಾರ ಅಪಘಾತಕ್ಕೆ ಬಲಿ

    July 15, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಪ.ಜಾತಿ, ಪಂಗಡ ಅಧಿಕಾರಿಗಳು ಮತ್ತು ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ

    July 19, 2025

    ಸರಗೂರು:  ತಾಲ್ಲೂಕಿನ ಪ. ಜಾತಿ ಮತ್ತು ಪ. ಪಂಗಡ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷರಾಗಿ ಕ್ಲಾರ್ಕ್ ಕಂ ಡಿಇಒರಾದ…

    ತಾ.ಪಂ., ಜಿ.ಪಂ. ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸರಗೂರು ಕೃಷ್ಣ ಆರೋಪ

    July 19, 2025

    ಶಾಸಕ ಪ್ರಭು ಚವ್ಹಾಣ್ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ಯುವತಿ ದೂರು ಸಲ್ಲಿಕೆ

    July 19, 2025

    ಖಾಸಗಿ ಬಸ್ ಪಲ್ಟಿ: 25ಕ್ಕೂ ಅಧಿಕ ಜನರಿಗೆ ಗಾಯ

    July 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.