ತಿಪಟೂರು: ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ತಮ್ಮ ಸೇವೆಸಲ್ಲಿಸುವ ಹಿನ್ನೆಲೆ ಕಾಯಂ ಸೇವಾ ಭದ್ರತೆ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ತರಗತಿ ಬಹಿಷ್ಕರಿಸಿ ಶುಕ್ರವಾರ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು.
ಸುಮಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ನಮಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ದೊರೆತಿಲ್ಲ. ಕೇವಲ ಮಾಸಿಕ ಭತ್ಯೆ ಪಡೆಯುತ್ತಿದ್ದೇವೆ. ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು ನಿರ್ಮಿಸುತ್ತಿರುವ ನಮಗೆ ರಾಜ್ಯ ಸರ್ಕಾರ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಅತಿಥಿ ಉಪನ್ಯಾಸಕರಿಗೆ ಖಾಯಂ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಹಿಂದೆ ಸರ್ಕಾರಿ ಕಾಲೇಜಿನಲ್ಲಿ ಹಂಗಾಮಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಪದನಾಮ ಬದಲಾದ ಸ್ಥಳೀಯ ಅಭ್ಯರ್ಥಿ ಸಾಫ್ಟ್ ಗ್ಯಾಪ್ ಗುತ್ತಿಗೆ ಆಧಾರಿತ ಅರೆಕಾಲಿಕ ಉಪನ್ಯಾಸಕರನ್ನು ಸರ್ಕಾರ ಮಾನವೀಯತೆ ಆಧಾರದ ಮೇಲೆ ಸೂಕ್ತ ಕಾಯ್ದೆ ತಿದ್ದುಪಡಿ ಮಾಡಿ ಪದನಾಮ ಹೊಂದಿರುವವರನ್ನು 1982.1992.2003 ರಲ್ಲಿ ಕಾಯಂ ಮಾಡಿರುವ ನಿದರ್ಶನಗಳಿವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಲ್ಲಿರುವ ಕಾರ್ಯನಿರತ ಹುದ್ದೆಗಳಿಗೆ ವಿರುದ್ಧವಾಗಿ ಹೊಸ ಹುದ್ದೆಗಳನ್ನು ಸೃಜಿಸಿ ಸೇರ್ಪಡೆ ಮತ್ತು ಕಾನೂನು ತಿದ್ದುಪಡಿ ಮಾಡಿಕೊಂಡು ಅನುಮೋದನೆ ನೀಡಿ ಎಂದು ತಿಳಿಸಿದರು
ಎಲ್ಲಾ ಅತಿಥಿ ಉಪನ್ಯಾಸಕರ ಅವರವರ ವಿದ್ಯಾರ್ಥಿಗೆ ಅನುಗುಣವಾಗಿ ಸೇವಾ ಭದ್ರತೆ ಜೊತೆಗೆ ಕಾಯಂ ಹುದ್ದೆ ಮಾಡಬೇಕು. ಜೊತೆಗೆ ಕಡಿಮೆ ಪ್ರೋತ್ಸಾಹ ಧನದಲ್ಲಿ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸಿದವರನ್ನು ಗಮನಿಸಿ ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಕೊಡುವ ಮುಖಾಂತರ ಸರ್ಕಾರಕ್ಕೆ ತಿಳಿಸಿದರು.
ಈ ಸಂದರ್ಭದಲ್ಲಿ. ಡಾ.ವೆಂಕಟೇಶ್, ಡಾ.ಸುಧಾ, ನವೀನ್, ಕುಮಾರಿ ವಿನುತಾ, ಪಲ್ಲವಿ, ರಾಯಪ್ಪ, ಶಿವಣ್ಣ ಸೇರಿದಂತೆ ಮುಂತಾದ ಅತಿಥಿ ಉಪನ್ಯಾಸಕರು ಹಾಜರಿದ್ದರು.
ವರದಿ: ಮಂಜು ಗುರುಗದಹಳ್ಳಿ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700