ಕೋಟೆ/ಸರಗೂರು: ಸರ್ವಧರ್ಮದ ಹೃದಯವಂತರು ಸೇವಾಸಂಸ್ಥೆಯ ಕಚೇರಿಯಲ್ಲಿ ಸೇವಾಸಂಸ್ಥೆಯ ಕ್ಯಾಲೆಂಡರ್ ಅನ್ನು ಶಾಸಕರಾದ ಅನಿಲ್ ಚಿಕ್ಕಮಾದು ಬಿಡುಗಡೆ ಮಾಡಿದರು,
ಬಳಿಕ ಮಾತನಾಡಿದ ಅವರು, ಸೇವಾಸಂಸ್ಥೆಯು ಚಿಕ್ಕದೇವ್ ಹೆಚ್. ಜಿ. ಹೆಗ್ಗಡಾಪುರ ರವರ ನೇತೃತ್ವದಲ್ಲಿ ನೂರಾರು ಸರ್ವಧರ್ಮದ ಸ್ನೇಹಿತರು ಸೇರಿ ಸರ್ವಧರ್ಮದ ಮಹಾನ್ ನಾಯಕರ ಆದರ್ಶಗಳನ್ನು ಇಟ್ಟುಕೊಂಡು ಉತ್ತಮವಾದ ಸಾಮಾಜಿಕ ಕಳಕಳಿಯ ಸೇವಾಕಾರ್ಯಗಳನ್ನು ಮಾಡುತ್ತಿರುವುದು ಸಮಾಜದಲ್ಲಿ ಉತ್ತಮ ಬೆಳವಣಿಗೆ ಆಗಿದೆ. ಇಂತಹ ಉತ್ತಮ ಕಾರ್ಯಗಳು ಹೆಚ್ಚೆಚ್ಚು ಆಗಬೇಕು. ಮುಂದಿನ ದಿನಗಳಲ್ಲಿ ಸೇವಾಸಂಸ್ಥೆಗೆ ಕೈಲಾದ ಸಹಕಾರ ನೀಡುವುದಾಗಿ ತಿಳಿಸುತ್ತಾ,ಈ ಸೇವಾಸಂಸ್ಥೆಯನ್ನು ಉಳಿಸಿ ಬೆಳೆಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸತೀಶ್ ಆರಾಧ್ಯ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಮೌಲ್ಯಗಳು ಕಡಿಮೆ ಆಗುತ್ತಿದ್ದು ಸರ್ವಧರ್ಮದವರು ಸೇರಿ ಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು ನೀಡುತ್ತಾ, ಮಾನವೀಯತೆ ಮೆರೆಯುತ್ತಿರುವ ಹೃದಯವಂತರು ಸೇವಾಸಂಸ್ಥೆಯ ಕಾರ್ಯವನ್ನು ಪ್ರಶಂಶಿಸಿದರು.
ಪತ್ರಕರ್ತರು ಬಸವರಾಜು, ಚಾ.ಶಿವಕುಮಾರ್, ಅಧ್ಯಕ್ಷ ಡಾ.ಜವರನಾಯಕ ಆಗತ್ತೂರು ರವರು ಮಾತಾನಾಡಿದರು. ಇದೇ ಸಂಧರ್ಭದಲ್ಲಿ ಸೇವಾಸಂಸ್ಥೆಯ ವತಿಯಿಂದ ಶಾಸಕರಾದ ಅನಿಲ್ ಚಿಕ್ಕಮಾದು, ಪತ್ರಕರ್ತರ ಸಂಘದ ಅಧ್ಯಕ್ಷರಾದ ಸತೀಶ್ ಆರಾಧ್ಯ,ಪತ್ರಕರ್ತ ಬಸವರಾಜು, ಪುರಸಭಾ ಸದಸ್ಯ ಮಧುಕುಮಾರ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸೇವಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚಿಕ್ಕದೇವ್ ಹೆಚ್. ಜಿ., ಹೆಗ್ಗಡಾಪುರ, ಅಧ್ಯಕ್ಷರಾದ ಡಾ.ಜವರನಾಯಕ ಪಿ ಆಗತ್ತೂರು, ಗೌರವ ಅಧ್ಯಕ್ಷರಾದ ಬಸವರಾಜು ಹೆಚ್ ಬಿ. ಕೋಟೆ, ಪುರಸಭಾ ಸದಸ್ಯ ಮಧುಕುಮಾರ್, ಕಾರ್ಯಾದ್ಯಕ್ಷ ಸಾಗರೆ ಮಹೇಂದ್ರ ಗೌಡ, ಉಪಾಧ್ಯಕ್ಷರಾದ ಮಹದೇವರಾಜು ಚೌಡಹಳ್ಳಿ, ಪ್ರಧಾನ ಕಾರ್ಯದರ್ಶಿ ನಂದಿನಿ ಚಿಕ್ಕದೇವ್, ತಾ.ಸಂಘಟನ ಕಾರ್ಯದರ್ಶಿ ರಾಜ್ ಕುಮಾರ್ ಎನ್. ಗೌಡ, ಸಹ ಕಾರ್ಯದರ್ಶಿ ವಿನೋದ್ ರಾಜ್ ಕೆ.ಎಂ ಹಳ್ಳಿ, ಕಮ್ರಾನ್ ಸಿದ್ದಿಖ್, ಸಂಘಟನಾ ಸಮಿತಿಯ ಬಸವರಾಜು ಹೆಚ್. ಸಲಹಾ ಸಮಿತಿಯ ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ತಾ.ಅಧ್ಯಕ್ಷರಾದ ಚಂದ್ರಕುಮಾರ್, ಕದಸಂಸ(ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕರಾದ ಚಾ.ಶಿವಕುಮಾರ್, ಪತ್ರಕರ್ತರಾದ ಹಾದನೂರು ದೊಡ್ಡಸಿದ್ದು, ಜ್ಯೋತೇಶ್ ಹಿರೇಹಳ್ಳಿ,ಶಶಿ ಪಟೇಲ್ ರವರು ಸೇರಿದಂತೆ ಸೇವಾಸಂಸ್ಥೆಯ ಸದಸ್ಯರು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy