ರಾಮನಗರ: ಚನ್ನಪಟ್ಟಣದ ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಎಸ್.ರಾಜು ಮೇಲೆ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದ್ದು, ಮಹಿಳೆಯೊಬ್ಬರು ಅಕ್ಕೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
2 ದಿನದ ಹಿಂದೆ ಗಣೇಶ ವಿಸರ್ಜನೆ ವೇಳೆ ರಾಜು ನನ್ನ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದು, ನನ್ನ ಮನೆ ಮುಂದೆಯೇ ನನ್ನ ಫೋಟೋ ತೆಗೆದು ರೇಗಿಸಿ ಕಿರುಕುಳ ನೀಡಿದ್ದಾನೆ ಅಂತ ದೂರಿನಲ್ಲಿ ಹೇಳಲಾಗಿದೆ.
ಗಣೇಶ ಮೂರ್ತಿ ಮೆರವಣಿಗೆ ದಿನ ರಾತ್ರಿ 11:30ರ ಸಮಯದಲ್ಲಿ ಮನೆಯ ಎದುರು ರಸ್ತೆಯಲ್ಲಿ ನಿಂತಿದ್ದ ವೇಳೆ ಆರೋಪಿ ಬಂದು, ಯಾವಗ ಬಂದೆ ಬೇಬಿ ಎಂದು ಪ್ರಶ್ನಿಸಿ, ಹೆಗಲ ಮೇಲೆ ಕೈ ಹಾಕಿ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದು, ಬಳಿಕ ಮಹಿಳೆಯ ಫೋಟೋ ತೆಗೆದು ಬೇರೆಯವರಿಗೂ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೂಡ ಕರೆ ಮಾಡಿ, ಕಾಫಿ ಡೇ ಗೆ ಹೋಗೋಣ ಅಂತ ಕರೆದು ಕಿರುಕುಳ ನೀಡಿದ್ದು, ಹಲವು ಬಾರಿ ಮೈಕೈ ಮುಟ್ಟಿ ಮಹಿಳೆಯ ಗೌರವಕ್ಕೆ ಚ್ಯುತಿ ತಂದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಸಂಬಂಧ ಚನ್ನಪಟ್ಟಣದ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಬಿಜೆಪಿ ಎಂಎಲ್ಸಿ ಸಿ.ಪಿ ಯೋಗೇಶ್ವರ್ ಗೆ ಆಪ್ತ ವಲಯದಲ್ಲಿ ಆರೋಪಿ ರಾಜು ಗುರುತಿಸಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಚನ್ನಪಟ್ಟಣದ ತೂಬಿನಕೆರೆ ಗ್ರಾಮದ ನಿವಾಸಿಯಾಗಿದ್ದು, ಕಳೆದ ಎರಡು ದಿನಗಳ ಹಿಂದೆ ಗಣೇಶ ವಿಸರ್ಜನೆ ವೇಳೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದೂರಿನಲ್ಲಿ ಸಂತ್ರಸ್ತ ಮಹಿಳೆ ಕಾನೂನು ಕ್ರಮವಹಿಸಿ ಎಂದು ಆಗ್ರಹಿಸಿದ್ದಾರೆ.
ಬಿಜೆಪಿಯಿಂದ ಆರೋಪಿ ರಾಜು ಅಮಾನತು:
ಚನ್ನಪಟ್ಟಣ ಬಿಜೆಪಿ ಅಧ್ಯಕ್ಷನ ವಿರುದ್ಧ FIR ಪ್ರಕರಣದ ಸಂಬಂಧ ಟಿ.ಎಸ್.ರಾಜು ಅಮಾನತು ಮಾಡಿ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ಆದೇಶ ಮಾಡಿದ್ದಾರೆ. ಮಹಿಳೆ ಕೇಸ್ ನಲ್ಲಿ FIR ಆಗ್ತಿದ್ದಂತೆ ಸಸ್ಪೆಂಡ್ ಮಾಡಿ ಕ್ರಮ ಕೈಗೊಳ್ಳಲಾಗಿದ್ದು, ಸದ್ಯ ಆರೋಪಿ ರಾಜು ಪೊಲೀಸರಿಗೆ ಸಿಗದೆ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


