ಬೆಂಗಳೂರು: ಶಕ್ತಿಯೋಜನೆಯಿಂದಾಗಿ ರಾಜ್ಯದ ದೇಗುಲಗಳಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ. ಶಕ್ತಿಯೋಜನೆ ಜಾರಿಯಾದ ಬೆನ್ನಲ್ಲೇ ದೇವಸ್ಥಾನಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವ ಕಾರಣ, ಮುಜರಾಯಿ ವ್ಯಾಪ್ತಿಯ ಪ್ರಮುಖ ದೇವಾಲಯಗಳಲ್ಲಿ ಜನರು ಹರಕೆ, ಪೂಜೆ ಸಲ್ಲಿಸಲು ಪರದಾಡುವಂತಾಗಿದೆ.
ಈವರೆಗೆ ಖಾಲಿ ಖಾಲಿಯಾಗಿದ್ದ ದೇಗುಲಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಆರಂಭವಾಗಿದೆ. ಮಹಿಳೆಯರಿಗೆ ಫ್ರೀ ಬಸ್ ಇರುವ ಕಾರಣ ಕುಟುಂಬ ಸಮೇತವಾಗಿ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.
ಇದೀಗ ದೇವಸ್ಥಾನಗಳಲ್ಲಿ ಅಗತ್ಯ ಸೌಲಭ್ಯಗಳಾದ ವಸತಿ, ಲಾಡ್ಜ್ ಗಳು ಸಿಗದೇ ಭಕ್ತರು ಪರದಾಡುತ್ತಿರುವ ಕಾರಣ ಮುಜರಾಯಿ ಇಲಾಖೆ ಹೊಸ ಪ್ಲಾನ್ ಗೆ ಮುಂದಾಗಿದೆ. ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಆನ್ ಲೈನ್ ಯೋಜನೆ ಜಾರಿ ಮಾಡಲು ಮುಂದಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.


